Choose Language:

ಈ ಬೇಸಿಗೆಗೆ ಪಂಚ ಮಂತ್ರ

ಹವಾಮಾನಎನ್ನುವುದು ಯಾರ ಕೈಗೂ ಸಿಗದ ಮಾಯಾಜಿಂಕೆ. ಇನ್ನೇನು ಒಂದು ಋತುಮಾನಕ್ಕೆ ಸಂಪುರ್ಣವಾಗಿ ಹೊಂದಿಕೊಳ್ಳುತ್ತಿದ್ದೇವೆ ಎನ್ನುವಷ್ಟರಲ್ಲಿ ಕಾಲ ತನ್ನ ಬಣ್ಣವನ್ನು ಬದಲಾಯಿಸಿತ್ತದೆ. ಹೊಸ ಋತುವಿನ ಆಗಮನವಾಗುತ್ತದೆ. ಭಾರತೀಯ ಸಂಪ್ರದಾಯದ ಆರು ಋತುಗಳಲ್ಲಿ ಮೊದಲ ಆಗಮನ ವಸಂತ ಋತುವಿನದು. ಆಮೇಲೆ ಗ್ರಿಷ್ಮ ಅಥವಾ ಬೇಸಿಗೆ - ಮನಸ್ಸು ಉಲ್ಲಾಸದಿಂದ ಕೂಡಿದ್ದರೂ ಅಸಹನೀಯ ಬೇಗೆಯ ಕಾಲ. ಶಾಲೆಗೆ ರಜಾ, ಮಕ್ಕಳಿಗೆ ಮಜಾ. ಎಲ್ಲರಿಗೂ ಬಂಧು-ಮಿತ್ರರನ್ನು ಭೇಟಿಮಾಡುವ ಸಂಭ್ರಮ. ತಂದೆ-ತಾಯಂದಿರಿಗೆ ಮಕ್ಕಳನ್ನು ಹೇಗೆ ಬ್ಯುಸಿ ಇಡಬೇಕು ಎಂಬ ಚಿಂತೆ. ಜೊತೆಗೆ ಈ ಬೇಸಿಗೆಯ ಧಗೆಯಿಂದ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಕ್ರಮ.

ಈ ಆಯಾಸದಾಯಕ ಬೇಸಿಗೆಯನ್ನು ಆಹ್ಲಾದಕರವಾಗಿ ಮಾಡಲು ಇಲ್ಲಿದೆ ಪಂಚಮಂತ್ರಗಳು:

1. ನೀರೇ ಅಮೃತ!

ಬೇಸಿಗೆ ಎಂದರೆ ಬಿಸಿಲು, ಬೆವರು, ದಣಿವು. ಇದೆಲ್ಲದರ ವಿರುದ್ಧ ಹೊರಾಡುವ ಶಕ್ತಿ ಇರುವುದು ನೀರಿಗೆ. ನೀರು ಕುಡಿದಷ್ಟು ನಿಮಗೆ ಆರೋಗ್ಯ. ಹಾಗಾಗಿ ಹೊರಗಡೆ ಹೋಗುವಾಗ ತಪ್ಪದೇ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ.

2. ದೇಹವನ್ನು ತಂಪಾಗಿಸುವ ಆಹಾರ ಸೇವಿಸಿ:

ನಿಂಬೆ ಹಣ್ಣಿನ ಪಾನಕ ಅಥವಾ ಫ್ರೆಶ್ ಜ್ಯೂಸ್ ಸೇವಿಸಿ. ಮಸಾಲೆ ಭರಿತ ಆಹಾರಕ್ಕಿಂತ ದೇಹವನ್ನು ತಂಪಾಗಿಸುವ ಹೆಸರುಬೇಳೆ ಇರುವ ಆಹಾರ ಸೇವಿಸಿ.

3. ನೆರಳಲ್ಲಿನ ಕೆಲಸ ಆರಾಮದಾಯಕ:

ಮೈ ಚುರ್ರೆನಿಸುವ ಸೂರ್ಯ ನಿಮ್ಮನ್ನು ಡಿಹೈಡ್ರೇಟ್ ಮಾಡುತ್ತಾನೆ. ಆದ್ದರಿಂದ ಆದಷ್ಟು ನೆರಳಿನಲ್ಲಿ ಕೆಲಸಮಾಡಿ. ಬಿಸಿಲಿನಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದ್ದರೆ, ಹತ್ತಿಯ ಬಟ್ಟೆ ಧರಿಸಿ. ಪ್ರಜ್ಞಾಪುರ್ವಕವಾಗಿ ಪದೇ-ಪದೇ ನೀರನ್ನು ಸೇವಿಸಿ.

4. ಎಣ್ಣೆಸ್ನಾನ ಆರೋಗ್ಯದಾಯಕ:

ನಮ್ಮ ಪುರ್ವಜರು ಯಾವುದೇ ರೂಢಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿದ್ದರೂ ಅದಕ್ಕೆ ಕಾರಣವಿದೆ. ಹಾಗೆಯೇ ಎಣ್ಣೆ-ಸ್ನಾನ ಕೂಡ. ವಾರದಲ್ಲಿ ಎರಡು ಬಾರಿ ತಲೆಗೆ, ಮೈ-ಕೈಗೆ ಎಣ್ಣೆ ಹಚ್ಚಿಕೊಂಡು ತಲೆ ಸ್ನಾನ ಮಾಡಿ. ಇದು ನಿಮ್ಮ ದೇಹವನ್ನು ತಂಪಾಗಿರಿಸಿ, ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.

5. ಆರೋಗ್ಯ ತಪಾಸಣೆ:

ಬೇಸಿಗೆಯಲ್ಲಿ ಆರೋಗ್ಯ ಕೆಡುವುದು ಅಥವಾ ವಾಂತಿ-ಬೇಧಿ ಕಾಡುವುದು ಸಹಜ. ಹಾಗೆ ಆದಲ್ಲಿ ವೈದ್ಯರನ್ನು ಭೇಟಿ ಆಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಸೂಕ್ತ ಔಷಧಿಯೊಂದಿಗೆ ರೋಗಗಳನ್ನು ತಡೆಗಟ್ಟುವ ಬಗ್ಗೆ ಕಾಳಜಿವಹಿಸಿ.


Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment