Choose Language:

ಗಿಫ್ಟ್ ಐಡಿಯಾ - ಅಮ್ಮ, ನಿನಗೊಂದು ಒಲವಿನ ಉಡುಗೊರೆ!

ಪ್ರತಿ ವರ್ಷದಂತೆ ಈ ವರ್ಷವು ತಾಯಂದಿರದಿನ ಬರುತ್ತದೆ. ಆಕೆಯ ಬಗ್ಗೆ ಹಾಡಿಹೊಗಳುತ್ತೇವೆ, ಅಕ್ಕರೆಯಿಂದ ವಿಷ್ ಮಾಡಿ, ಶುಭಕೋರುತ್ತೇವೆ. ಆದರೆ ಈ ವರ್ಷದತಾಯಂದಿರ ದಿನವನ್ನು ಸ್ಮರಣೀಯ ಮಾಡಲು ಏನುಮಾಡಬೇಕು? ಇಲ್ಲಿದೆ ಕೆಲವು ಯೋಜನೆಗಳು. ಈ ಯೋಜನೆಗಳೊಂದಿಗೆ ಆಕೆಯನ್ನುಸಂತಸಗೊಳಿಸಿ, ಆಕೆಯ ದಿನವನ್ನು ಅವೀಸ್ಮರಣೀಯಗೊಳಿಸಿ.

1.            ಪಾಕಶಾಸ್ತ್ರ ಪ್ರತಿಭೆಯ ಪ್ರಯೋಗ:

ಪ್ರತಿಯೊಬ್ಬಹೆಣ್ಣಿಗೂ ತನ್ನದೇ ಆದ ಅಭಿರುಚಿಇರುತ್ತದೆ. ಆದರೆ, ಆ ಹೆಣ್ಣುತಾಯಿಯಾದೊಡನೆ ಆಕೆಯ ಆದ್ಯತೆಗಳು ಬದಲಾಗುತ್ತವೆ. ತನ್ನ ಮಗುವಿನ ಹುಟ್ಟು-ಬೆಳವಣಿಗೆಗಳನ್ನುಸಂಭ್ರಮಿಸುವುದರಲ್ಲಿ ತನ್ನ ಆಸೆ ಹಾಗೂಅಗತ್ಯತೆಗಳನ್ನು ಮರೆಯುತ್ತಾಳೆ. ಈ ತಾಯಂದಿರ ದಿನದಂದುಆಕೆಯ ಇಷ್ಟಗಳಿಗೆ ಪ್ರಾಮುಖ್ಯತೆ ನೀಡಿ. ಆಕೆಯ ಮೆಚ್ಚಿನಅಡುಗೆ ತಿಳಿದುಕೊಳ್ಳಿ. ಆಕೆಗೋಸ್ಕರ ನಿಮ್ಮ ಪಾಕಶಾಸ್ತ್ರದ ಜ್ಞಾನವನ್ನುಪ್ರಯೋಗಿಸಿ, ಆಕೆಯ ನೆಚ್ಚಿನ ಅಡುಗೆತಯಾರಿಸಿ. ಆಕೆ ಖುಷಿ ಪಡುವುದನ್ನುನೋಡಿ, ನೀವೂ ಥ್ರಿಲ್ ಆಗಿ.

2.            ತಾಯಿಗೋಸ್ಕರ ಸಮಯ ಮೀಸಲಿಡಿ:

ಮಕ್ಕಳುತಮ್ಮ ಸ್ವತಂತ್ರ ಬದುಕು ರೂಪಿಸಿಕೊಳ್ಳುವ ಅವಸರದಲ್ಲಿರುವಾಗತಾಯಿಗೋಸ್ಕರ ಮೀಸಲಿಡುವ ಸಮಯ ಅತೀ ಕಡಿಮೆ. ಹಾಗಾಗಿ ಈ ತಾಯಂದಿರ ದಿನದಂದುನಿಮ್ಮ ತಾಯಿಗೆ ನಿಮ್ಮ ಸಮಯದಉಡುಗೊರೆ ನೀಡಿ. ನಿಮ್ಮ ಮೊಬೈಲ್ಸ್ವಿಚ್ ಆಫ್ ಮಾಡಿ, ನಿಮ್ಮಲಾಪ್ಟಾಪ್ ಬದಿಗಿಟ್ಟು, ಆಕೆಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ಆಕೆಯೊಂದಿಗೆ ದೇವಸ್ಥಾನಕ್ಕೆ ಹೋಗಿ, ಆಕೆಗೆ ಅಡುಗೆಮಾಡಲು ಸಹಾಯ ಮಾಡಿ, ಅಕೆಗೋಸ್ಕರಪ್ರವಾಸ ಆಯೋಜಿಸಿ - ನಿಮ್ಮ ಸಂಪುರ್ಣ ಸಮಯವನ್ನುಆಕೆಗೋಸ್ಕರ ಕಾಯ್ದಿರಿಸಿ. ಆಗ ಆಕೆಯ ಮುಖದಲ್ಲಿಕಾಣುವ ಸಂತೃಪ್ತತೆ ಇದೆಯಲಾ,್ಲ ಅದುಲಕ್ಷ ಕೊಟ್ಟರೂ ಬಾರದು.

3.            ಸವಿನೆನಪುಗಳ ಸಂಗ್ರಹಣೆ:

ಸವಿನೆನಪುಗಳುಮನಸ್ಸಿಗೆ ಮುದ ನೀಡುತ್ತವೆ. ಈತಾಯಂದಿರ ದಿನದಂದು ಅಂತಹ ನೆನಪುಗಳನ್ನುನಿಮ್ಮ ತಾಯಿ ಸ್ಮರಿಸಿಕೊಳ್ಳುವಂತೆ ಮಾಡಿ. ಆಕೆಯ ಹಳೇ ಫೋಟೋಗಳನ್ನು ಒಂದುಆಲ್ಬಮ್ ಮಾಡಿ, ಆಕೆಗೆ ಉಡುಗೊರೆನೀಡಿ. ಅಥವಾ ಒಂದು ಚಲನಚಿತ್ರಮಾಡಿ, ಅದರ ಡಿವಿಡಿ ಆಕೆಗೆಗಿಫ್ಟ್‌ ಕೊಡಿ.

4.            ಆಕೆಯ ಪೇಂಟಿಂಗ್:

ನಿಮ್ಮ ಚಿತ್ರಕಲೆಯ ಕೌಶಲ್ಯ ಪ್ರಯೋಗಿಸಿ. ನಿಮ್ಮತಾಯಿಯ ರೇಖಾಚಿತ್ರ ಅಥವಾ ವರ್ಣಚಿತ್ರ ಬಿಡಿಸಿ, ಆಕೆಗೆ ಉಡುಗೊರೆ ಕೊಡಿ. ಇಲ್ಲವೇಆಕೆಗೆ ಆತ್ಮೀಯವಾಗಿರುವ ಫೋಟೋವನ್ನು ನಿಮ್ಮ ಚಿತ್ರಕಲೆಯೊಂದಿಗೆ ಮರುಸೃಷ್ಟಿಸಿ. ಖಂಡಿತವಾಗಿಯೂ ಆಕೆ ತನ್ನ ಕೊನೆಯಕ್ಷಣದವರಗೂ ಆ ಚಿತ್ರವನ್ನು ಪ್ರೀತಿಯಿಂದಕಾಪಾಡಿಕೊಳ್ಳುತ್ತಾಳೆ.


Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment