Choose Language:

ಸಾಂಸ್ಕೃತಿಕ ನಗರಿ - ನಮ್ಮ ಧಾರವಾಡ

ಈ ನಾಡಿನ ಮಣ್ಣಿನ ಗುಣವೇ ಹಾಗೆ. ಇಲ್ಲಿ ಹುಟ್ಟುವ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಂಗೀತಕಾರ ಅಥವಾ ಸಾಹಿತಿ ಇರುತ್ತಾನೆ. ಇಲ್ಲವೇ ಅವುಗಳನ್ನು ಅಕ್ಕರೆಯಿಂದ ಪ್ರಶಂಸಿಸುವ ವ್ಯಕ್ತಿತ್ವವಿರುತ್ತದೆ. ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಷಿ, ಬಸವರಾಜ ರಾಜಗುರು, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಚನ್ನವೀರ ಕಣವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ. ಬೇಂದ್ರೆ, ವಿ. ಕೆ. ಗೊಕಾಕ್, ಗಿರೀಶ್ ಕಾರ್ನಾಡ್ ಇಂತಹ ಪ್ರಮುಖ ವ್ಯಕ್ತಿಗಳಿಗೆ ಜನ್ಮ ನೀಡಿದ ಕ್ಷೇತ್ರವದು. ಇಲ್ಲಿ ಸಾಹಿತ್ಯದ ಸೊಬಗಿದೆ, ಹಿಂದೂಸ್ತಾನಿ ಸಂಗೀತದ ಮಾಧುರ್ಯವಿದೆ. ಬೇಸಿಗೆಯಲ್ಲಿ ಬೇಗೆ ಸ್ವಲ್ಪ ಜಾಸ್ತಿ ಅನ್ನಿಸಿದರೂ, ಈ ನಾಡಿನ ವನರಾಶಿ, ಮಳೆಗಾಲದ ಮಳೆ ಮನಸ್ಸಿನಲ್ಲಿ ನವೊಲ್ಲಾಸ ತುಂಬುತ್ತದೆ. ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ (ಕವಿವಿ), ಕೃಷಿ ವಿಶ್ವವಿದ್ಯಾಲಯ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದರೊಂದಿಗೆ, ಧಾರವಾಡದ ನಿಸರ್ಗ ಸೌಂದರ್ಯಕ್ಕೆ ಸಾಕ್ಷಿಯಾಗಿವೆ. ಶಾಲ್ಮಲ ತಟದ ಸೋಮೇಶ್ವರ, ನಗ್ಗಿಕೇರಿಯ ಹನುಮಂತ, ದತ್ತಾತ್ರೇಯ ಸ್ವಾಮಿಯ ದೇವಸ್ಥಾನ, ಮುರುಘರಾಜೇಂದ್ರ ಸ್ವಾಮಿಯ ಮಠ - ಇಲ್ಲಿಯ ಭಕ್ತಿ ಭಾವಗಳ ಸಂಕೇತವಾಗಿವೆ. ಸಾಧನಕೇರಿ ಉದ್ಯಾನ, ಕೆಲಗೇರಿ ಕೆರೆ - ಬಂಧುಮಿತ್ರರೊಡನೆ ವಿಹಾರ ಹೋಗಲು ಸೂಕ್ತವಾಗಿವೆ. "ರಸವೇ ಜನನ, ವಿರಸ ಮರಣ, ಸಮರಸವೇ ಜೀವನ" ಎಂದು ಜೀವನದ ಇಡೀ ಸಾರಾಂಶವನ್ನು ಸರಳ ಸಾಲುಗಳಲ್ಲಿ ಹೇಳಿದ ದ.ರಾ.ಬೇಂದ್ರೆ ಅವರ ವ್ಯಕ್ತಿತ್ವ ಹಾಗೂ ಜೀವನಶೈಲಿಯನ್ನು ಬಿಚ್ಚಿಡಲು ಬೇಂದ್ರೆ ಭವನವಿದೆ. ಇಲ್ಲಿಯ ಗ್ರಾಮ್ಯ ಕನ್ನಡ ಮನಸ್ಸಿಗೆ ಮುದ ನೀಡಿದರೆ, ಇಲ್ಲಿಯ ಚಹಾ, ಗಿರಮಿಟ್ಟು, ಚೂಡಾ ಜೊತೆಗೆ ಧಾರವಾಡ ಪೇಢ ನಾಲಿಗೆಗೆ ರುಚಿ ತೋರಿಸುತ್ತದೆ. ಈ ನಾಡು ನಮ್ಮ ಕರ್ನಾಟಕದ ಹೆಮ್ಮೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಿದ್ಯಾ ಕೇಂದ್ರ. ಇದುವೇ ನಮ್ಮ ಧಾರವಾಡ.

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment