Choose Language:

"ಸಕಾರಾತ್ಮಕ ಯೋಚನೆಯ ಶಕ್ತಿ " - ಒಂದು ವಿಮರ್ಶೆ

ಇಂಟರ್ನ್ಯಾಷನಲ್ ಬೆಸ್ಟ್-ಸೆಲ್ಲರ್ ಎಂದು ಖ್ಯಾತಿ ಪಡೆದಿರುವ ನಾರ್ಮನ್ ವಿನ್ಸೆಂಟ್ ಪೀಲೆ ರಚಿತ “ಸಕಾರಾತ್ಮಕ ಯೋಚನೆಯ ಶಕ್ತಿ” ಪುಸ್ತಕವು ಇಪ್ಪತ್ತು ಲಕ್ಷ ಪ್ರತಿಗಳು ಮಾರಾಟವಾದ ನಂತರ ಈ ಗ್ರಂಥದ ಕನ್ನಡದ ಅವತರಣಿಕೆ ಮೊಟ್ಟಮೊದಲ ಬಾರಿಗೆ ೨೦೧೮ರಲ್ಲಿ ಪ್ರಕಟಗೊಂಡಿತು. ಡಾ. ಶಿವಾನಂದ್ ಬೇಕಲ್ ಅವರಿಂದ ಭಾಷಾಂತರಗೊಂಡ ಈ ಕೃತಿಯು ಭೋಪಾಲ್-ದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಂಜುಳಾ ಪಬ್ಲಿಷಿಂಗ್ ಹೌಸ್ ಇವರಿಂದ ಹೊರಹೊಮ್ಮಿದೆ. ಹದಿನೇಳು ಅಧ್ಯಾಯಗಳ, ೩೧೯ ಪುಟಗಳ ಈ ಕೃತಿಯು ಲೇಖಕರ ಮುನ್ನುಡಿ ಹಾಗೂ ಅಂತ್ಯದಲ್ಲಿ ಉಪಸಂಹಾರದೊಂದಿಗೆ ಮುಕ್ತಾಯಗೊಳ್ಳುತ್ತದೆ. ೨೫ ವರ್ಷಗಳ ಹಿಂದೆ, ೧೯೯೩ರಲ್ಲಿ ತಮ್ಮ ತೊಂಬತ್ತೈದನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಪ್ರಖರ, ಧಾರ್ಮಿಕ ಹಾಗೂ ಮನೋವೈಜ್ಞಾನಿಕ ಚಿಂತಕ ನಾರ್ಮನ್ ವಿನ್ಸೆಂಟ್ ಪೀಲೆ ತಮ್ಮ ಕೆಲವು ಇತರ ಕೃತಿಗಳಲ್ಲದೇ ಪ್ರಸಕ್ತ ನನ್ನ ನಮ್ರ ವಿಮರ್ಶೆಯ ಸಂಕ್ಷಿಪ್ತ ಚೌಕಟ್ಟಿಗೆ ಒಳಗಾಗಿರುವ “ಸಕಾರಾತ್ಮಕ ಯೋಚನೆಯ ಶಕ್ತಿ” ಗ್ರಂಥವು ವಿಶ್ವದ ವಿವಿಧ ಭಾಷೆಗಳಿಗೆ ತುರ್ಜಮೆಗೊಂಡು ಓದುಗರ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ವೈಚಾರಿಕ ಹಾಗೂ ಆಧ್ಯಾತ್ಮಿಕ ಔಷಧಿಯಾಗಿ ಗಾಢ ಪರಿಣಾಮ ಬೀರಿದೆ. ಈ ಗ್ರಂಥ ಓದಿ ನಾನು ಮಂತ್ರಮುಗ್ಧಳಾಗಿದ್ದೇನೆ. ಜ್ಞಾನವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಖುಷಿಯೊಂದಿಗೆ ಲ್ಯಾಪ್-ಟಾಪ್ ಕೈಗೆತ್ತಿಕೊಂಡಿದ್ದೇನೆ. 

“ನಿಮಗೆ ನಿಮ್ಮಲ್ಲಿ ವಿಶ್ವಾಸವಿರಲಿ” ಎಂಬ ಪ್ರಥಮ ಅಧ್ಯಾಯದೊಂದಿಗೆ ಆರಂಭವಾಗುವ ಈ ಗ್ರಂಥ ಪ್ರಶಾಂತವಾದ ಮನಸ್ಸಿನೊಂದಿಗೆ ಶಕ್ತಿ ಪಡೆದು ಒಬ್ಬ ವ್ಯಕ್ತಿ ನಿರಂತರ ಶಕ್ತಿವಂತನಾಗಿರುವ ಮಹತ್ವವನ್ನು ಪ್ರತಿಪಾದಿಸಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪ್ರಾರ್ಥನೆಯಿಂದ ಶಕ್ತಿಯನ್ನು ಹೇಗೆ ಶೋಧಿಸಬೇಕೆಂಬ ಮಾರ್ಗದರ್ಶನವನ್ನು ಪ್ರಾಯೋಗಿಕ ದೃಷ್ಟಾಂತಗಳೊಂದಿಗೆ ಮನವರಿಕೆ ಮಾಡಿಕೊಡುತ್ತದೆ. 

ನಾವು ಸುಖವಾಗಿರುವುದು ನಮ್ಮ ಕೈಗಳಲ್ಲೇ ಇದೆ ಎಂದು ಸ್ಪಷ್ಟ ಪಡಿಸುತ್ತಾ, ಸಿಟ್ಟು-ಸಿಡುಕುಗಳನ್ನು ಬಿಟ್ಟು ಜೀವನದಲ್ಲಿ ಉತ್ತಮತೆಯನ್ನು ಖಂಡಿತ ಪಡೆಯಬಹುದು ಎಂಬ ಭರವಸೆಯನ್ನು ನೀಡುತ್ತದೆ. ಲೇಖಕರು ತಾವು ಸೋಲುವುದರಲ್ಲಿ ವಿಶ್ವಾಸವಿಡುವುದಿಲ್ಲ ಎಂಬ ಧೀರವಾಣಿ ಮೊಳಗಿಸಿದ್ದಾರೆ. 

ನಾವು ಚಿಂತೆಗೀಡಾಗುವ ಅಭ್ಯಾಸವನ್ನು ಬಿಡಬೇಕು. ಆಗ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿ ವೃದ್ಧಿಸುತ್ತದೆ. ಮಾನವನ ಯಾವುದೇ ಚಿಕಿತ್ಸೆಯಲ್ಲಿ ನಂಬಿಕೆ ಅಥವಾ ದೇವನಂಬಿಕೆ ಎಂಬುದು ಸುಭದ್ರವಾದ ಊರುಗೋಲು. ಈ ಕೆಲವು ಆರೋಗ್ಯ ಸೂತ್ರಗಳನ್ನು ಬಳಸಿದಲ್ಲಿ ಶಕ್ತಿ ಕುಂದುವ ವೇಳೆಯಲ್ಲಿಯೂ ಮಾನವ ವಿಜೃಂಭಿಸಬಹುದು.

ಒಟ್ಟಿನಲ್ಲಿ ನಮ್ಮ ನಿಲುವನ್ನು ಬದಲಿಸಿ ಹೊಸ ಮನುಷ್ಯರಾಗಬೇಕು. ಸಹಜ ಶಕ್ತಿಗೋಸ್ಕರ ವಿಶ್ರಾಂತಿಯನ್ನು ಅವಲಂಬಿಸಬೇಕು ನಮ್ಮ ಆತ್ಮಶಕ್ತಿ ಹಾಗೂ ಆತ್ಮವಿಶ್ವಾಸ ನಮ್ಮನ್ನು ಜನಪ್ರಿಯಗೊಳಿಸಬಲ್ಲದು. ಮುಪ್ಪು, ಖಾಯಿಲೆ, ಮರಣಕ್ಕೆ ಹೆದರದೇ  ಹೃದಯಕ್ಕೆ ಸದಾ ಹರ್ಷಮಯವಾಗಿರುವ ಔಷಧ ಒದಗಿಸಬಹುದು. ಭಗವಂತನಿಂದ ಶಕ್ತಿ ಹೇಗೆ ಪ್ರಾಪ್ತವಾಗುತ್ತದೆ ಎಂಬುದನ್ನು ನೀವು ಬಲ್ಲಿರಾ? ತಿಳಿಯಬೇಕಿದ್ದರೆ ಈ ಗ್ರಂಥವನ್ನು ತಪ್ಪದೇ ಓದಿ. ಬೈಬಲ್-ನ ಬೆಳಕು ಹಾಗೂ ಜೀಸಸ್-ನ ಅಂತಃಕರುಣೆ ಲೇಖಕ ಹಾಗೂ ಈ ಗ್ರಂಥದ ಜೀವಾಳವಾಗಿದೆ. Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment