Choose Language:

ಮಕರ ರಾಶಿ ಗುಣ-ಸ್ವಭಾವ

ಮಕರ ರಾಶಿ: ಡಿಸೇಂಬರ್ ೨೩- ಜನವರಿ ೨೦

ಅಪಾರ ಕನಸಗಳನ್ನು ಹೊತ್ತಿರುವ ರಾಶಿ ಇದು. ಹಾಗಂದರೆ ಗಾಳಿಯಲ್ಲಿ ಗೋಪುರ ಕಟ್ಟುವ ರಾಶಿಯವರಲ್ಲ, ಕನಸಿನ ಜೊತೆ ಅದನ್ನು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವ ರಾಶಿಯವರು. ಮಹಾನ್ ಆಶಾವಾದಿಗಳು. ಅವರ ಗುರಿ ಸಣ್ಣ-ಪುಟ್ಟದ್ದೇ ಆಗಿರಲಿ, ಇಲ್ಲವೇ ದೊಡ್ಡದು, ಕಷ್ಟಪಟ್ಟು ದುಡಿದು, ಅದನ್ನು ಸಾಧಿಸುವುದಂತೂ ನಿಜ. ಆದರೆ, ಇವರ ಗುರಿಗಳು ಸಣ್ಣ-ಪುಟ್ಟದ್ದು ಆಗಿರುವ ಸಾಧ್ಯತೆಗಳು ತುಂಬಾ ಕಡಿಮೆ. ಅವರದು ಏನಿದ್ದರೂ ಹಾಸಿಗೆಗಿಂತ ಜಾಸ್ತಿ ಕಾಲು ಚಾಚುವ ಗುಣ. ಅದರರ್ಥ ಅವರು ಅತಿ ಆಸೆಯುಳ್ಳವರು ಅಂದಲ್ಲ. ಅದರರ್ಥ ಅವರ ಕಾಲು ಹಾಸಿಗೆಗಿಂತ ಉದ್ದವಾಗಿರುತ್ತದೆ. ಎಂಥ ಕಷ್ಟದ ಕೆಲಸ ಕೊಟ್ಟರೂ ಸರಾಗವಾಗಿ ನಿಭಾಯಿಸುತ್ತಾರೆ. ಮೌಂಟ್ ಎವರೆಸ್ಟ್ ಹತ್ತಬೇಕು ಎನ್ನುವ ಛಲ ಹೊತ್ತರೆ, ಅದನ್ನು ಅತಿ ಸುಲಭವಾಗಿ ತೀರಿಸಿ, ಅವರ ವಿರೋಧಿಗಳ ಎದುರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವ ಗುಣ ಅವರದು. ಪಕ್ಕಾ ವರ್ಕೋಹಾಲಿಕ್, ದುಡಿಯೋದು ಎಂದರೆ ಭಾರಿ ಒಲವು. ಆದರೆ ಈ ರಾಶಿಯವರಲ್ಲಿ ಒಂದೇ ತೊಂದರೆ ಎಂದರೆ ಎಲ್ಲರೂ ತಮ್ಮಂತೆ ಆಶಾವಾದಿಗಳು ಹಾಗೂ ವರ್ಕೋಹಾಲಿಕ್ ಆಗಿ ಇರಬೇಕು ಎಂದು ಬಯಸುವುದು. ಇದರಿಂದ ಜೊತೆಗಾರರ ಕೋಪಕ್ಕೆ, ಬೇಸರಕ್ಕೆ ತುತ್ತಾಗಿ, ಸಂಬಂಧಗಳು ಕತ್ತರಿಸಿ ಹೋಗುವ ಸಾಧ್ಯತೆಗಳಿರುತ್ತವೆ. ಅವೆಲ್ಲವನ್ನೂ ಮೀರಿ ತಮ್ಮ ಸಂಗಾತಿ ಬಗ್ಗೆ ಅತಿಯಾದ ಪ್ರೀತಿ. 

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment