Choose Language:

ತುಲಾ ರಾಶಿ ಗುಣ-ಸ್ವಭಾವ

ತುಲಾ ರಾಶಿ:

ಈ ರಾಶಿಯವರ ಚಿಹ್ನೆ ತಕ್ಕಡಿ ಹಿಡಿದಿರುವ ಮನುಷ್ಯ. ಈ ಚಿಹ್ನೆ ತುಲಾ ರಾಶಿಯವರ ಗುಣ ಲಕ್ಷಣಗಳನ್ನು ತೋರುತ್ತದೆ. ತುಲಾ ರಾಶಿಯವರು ಯಾವುದೇ ವಿಷಯದಲ್ಲಿ ಯಾರ ಬಗ್ಗೆಯೇ ಆಗಲಿ ನಿಷ್ಪಕ್ಷಪಾತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರಲ್ಲಿ ನಿಪುಣತೆ ಹಾಗೂ ಅಧ್ಯಯನಶೀಲತೆ ತುಂಬಿರುತ್ತದೆ. ಆದ್ದರಿಂದ ಇವರು ೬೪ ವಿದ್ಯೆಗಳಲ್ಲಿ ಯಾವುದೇ ವಿದ್ಯೆಗಳನ್ನು ಆಯ್ದುಕೊಂಡರೂ, ಯಶಸ್ವಿಯಾಗಿ, ಖ್ಯಾತಿ ಪಡೆಯುತ್ತಾರೆ. ತುಲಾ ರಾಶಿಯವರು ವ್ಯವಹಾರದ ಹಾಗೂ ವ್ಯಾಪಾರದ ಬಗ್ಗೆ ಗಾಢವಾಗಿ ತಿಳಿದುಕೊಳ್ಳುವ ಆಸಕ್ತಿ ಹೊಂದಿದವರಾಗುತ್ತಾರೆ. ಸ್ಥಿರ ಉದ್ಯೋಗ ಇವರಿಗಲ್ಲ. ಮುಖದಲ್ಲಿ ಕಳೆ, ತೇಜಸ್ಸು ಹೊಂದಿರುವ ಇವರು, ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಅನುಭವಿಸುತ್ತಾರೆ. ಧೈರ್ಯವಂತರಾಗಿದ್ದರೂ ಯಾವಾಗಲೂ ನ್ಯಾಯ ಸಮ್ಮತರಾಗಿರುತ್ತಾರೆ. ಸಂಗೀತ, ಸಾಹಿತ್ಯ, ನಾಟಕ, ತಮಗೆ ಆಸಕ್ತಿ ಇರುವ ಯಾವುದೇ ಕಲೆಯಲ್ಲಿ ಕೀರ್ತಿ ಪಡೆಯುವ ಸಾಮರ್ಥ್ಯ ಹೊಂದಿದವರಾಗುತ್ತಾರೆ. ಇತರರಿಗೆ ಸಹಾಯ ಹಸ್ತ ನೀಡುವ ಇವರು, ತಮ್ಮ ಮಾತಿನ ಚಾಣಾಕ್ಷತನದಿಂದಲೇ ಶತ್ರುಗಳನ್ನೂ ಗೆಲ್ಲುವ ಶಕ್ತಿಯನ್ನು ಹೊಂದಿರುತ್ತಾರೆ. ಇವರಲ್ಲಿರುವ ಮೃದು ಸ್ವಭಾವ, ಎಲ್ಲರನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಅವಕಾಶ ನೀಡುತ್ತದೆ. ಆತುರದ ಗುಣ-ಸ್ವಭಾವ, ನೇರ ನುಡಿ, ಸ್ಥಿರ ಮನಸ್ಸು ಇವರ ಗುಣಗಳಲ್ಲ. 

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment