Choose Language:

ವೃಶ್ಚಿಕ ರಾಶಿಯ ಗುಣ-ಸ್ವಭಾವಗಳು

ವೃಶ್ಚಿಕ ರಾಶಿಯವರು ಸಾಧಾರಣ ಮೈ ಬಣ್ಣದ ವ್ಯಕ್ತಿತ್ವದವರು. ಆದರೆ ಅವರಲ್ಲಿರುವ ಆತ್ಮಸ್ಥೈರ್ಯ ಮುಗಿಲು ಮುಟ್ಟುವಂತದ್ದು. ಇವರು ಒಂಟಿ ಸಲಗದಂತೆ - ಜೀವನದಲ್ಲಿ ಎಲ್ಲವನ್ನೂ ಒಂಟಿಯಾಗಿ ಸಾಧಿಸುವ  ಛಲ, ಧೈರ್ಯ ಮತ್ತು ಸ್ಥೈರ್ಯವನ್ನು ಹೊಂದಿರುವಂತವರು. ಈ ರಾಶಿಯವರಿಗೆ ಸ್ನೇಹಿತರ ಗುಂಪು ಹೆಚ್ಚು. ಆದರೆ ಇವರಿಗೆ ತಮ್ಮ ಕುಟುಂಬ ಎಲ್ಲಕ್ಕಿಂತ ಮಿಗಿಲಾಗಿರುವಂತದ್ದು. ದೃಢ ನಿರ್ಧಾರ ಹಾಗೂ ನಂಬಿಕೆ ಇವರಲ್ಲಿ ರಕ್ತಗತವಾಗಿರುವ ಗುಣ. ಕಠಿಣವಾಗಿ ಮಾತನಾಡುವುದು ಇವರ ಸ್ವಭಾವ. ಹಾಗಾಗಿಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಪ್ರಯತ್ನ ಮಾಡುತ್ತಾರೆ. ಸರಳ ಹಾಗೂ ನ್ಯಾಯಗತ ಜೀವನ ಇವರ ಅಗತ್ಯತೆ. ನಗುಮೊಗದ, ಸಂಪ್ರದಾಯಸ್ಥ ವ್ಯಕ್ತಿತ್ವದ ವೃಷ್ಚಿಕ ರಾಶಿಯವರು ವಿದ್ಯಾವಂತರೂ ಹಾಗೂ ಬುದ್ಧಿವಂತರೂ ಆಗಿರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಇವರ ಪ್ರತಿ ಮಾತುಗಳ ಹಿಂದೆ ಬಲವಾದ ಪುರಾವೆ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಇವರು ಚರ್ಚಿಸಲು ಮುಂದಾದರೆ, ಅದರ ಬಗ್ಗೆ ಆಳವಾದ ಸಂಶೋಧನೆ ಮಾಡಿರುತ್ತಾರೆ. ಸ್ವಾಭಿಮಾನ ಇವರಲ್ಲಿ ಹೆಚ್ಚು. ಮಿತ ಭಾಷಿಗರಾದರೂ ಮತ್ಸರ ಇರುವುದಿಲ್ಲ. ನಾಗರಹಾವಿನ ಸೇಡು ಹೊಂದಿರುವವರು - ಸೇಡನ್ನು ಬಹಳ ಕಾಲದವರೆಗೆ ಕಾದಿಟ್ಟುಕೊಳ್ಳುತ್ತಾರೆ.

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment