Choose Language:

ಗೂಗಲ್ ನಲ್ಲಿ ನಿಮ್ಮ ಆರೋಗ್ಯದ ಕುರಿತು ಓದುತ್ತೀರಾ? ಹಾಗಿದ್ದರೆ ನಿಮಗೆ ಸೈಬರ್ ಕಾಂಡ್ರಿಯಾ ಉಂಟಾಗದಿರಲಿ!

ಎರಡು ದಿನದಿಂದ ಮೈಕೈ ನೋವು. ಕೆಲಸದ ಒತ್ತಡ. ಸ್ವಲ್ಪ ತಲೆ ನೋವು ಕೂಡಾ. ಆದರೆ ಇರುವ ಕೆಲಸಗಳ ನಡುವೆ ವೈದ್ಯರ ಬಳಿ ಹೋಗಿ ಔಷಧಿ ತೆಗೆದುಕೊಳ್ಳುವುದಕ್ಕೆ ಸಮಯವಿಲ್ಲ. ಏನು ಮಾಡೋದು? ಥಟ್ ಅಂತ ತಲೆಗೆ ಬರೋ ಐಡಿಯಾ ಇಂಟರ್ನೆಟ್. ಇಂಟರ್ನೆಟಲ್ಲಿ ಓದಿ ಯಾಕೆ ಹೀಗಾಗುತ್ತಿದೆ ಅಂತ ತಿಳ್ಕೊಂಡ್ರೆ, ಅನುಕೂಲ ಆಗ್ಬಹುದು. ಔಷಧಿ ತೊಗೋಬಹುದು. ಈ ರೀತಿ ಯೋಚಿಸಿ ಬ್ರೌಸರ್ ಓಪನ್ ಮಾಡಿ “ತಲೆ ನೋವು” ಅಂತ ಗೂಗಲ್ ಮಾಡಿದರೆ, ಅದರ ಕುರಿತಾಗಿ ಸಾವಿರಾರು ಲೇಖನಗಳು. ಒಂದೊಂದಾಗಿ ಓದಿದರೆ, ಸಣ್ಣ ತಲೆ ನೋವಿನಿಂದ ಶುರುವಾಗಿ ಮೈಗ್ರೇನ್, ಬ್ರೈನ್ ಟ್ಯೂಮೊರ್, ಬ್ರೈನ್ ಕ್ಯಾನ್ಸರ್-ವರೆಗೂ ಎಲ್ಲದರ ಬಗ್ಗೆ ಮಾಹಿತಿ. ಸುಮಾರು ಲೇಖನಗಳನ್ನು ಓದಿ ಮುಗಿಸುವುದರೊಳಗೆ ‘ಇದು ಕೇವಲ ಸಣ್ಣ ತಲೆ ನೋವು ಅಲ್ಲ. ನನಗೆ ಬ್ರೈನ್  ಟ್ಯೂಮೊರ್ ಇದೆ’ ಎನ್ನುವ ನಂಬಿಕೆ. - ಇಂತಹ ಅನುಭವ ನಿಮಗೂ ಆಗಿದ್ದರೆ, ಆ ರೀತಿಯ ಭ್ರಮೆಗಳಲ್ಲಿ ಬದುಕಿದವರು ನೀವೊಬ್ಬರೇ ಅಲ್ಲ.

ಆದರ ಹೆಸರು ಸೈಬರ್ ಕಾಂಡ್ರಿಯಾ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯವನ್ನು ಇಂಟರ್ನೆಟ್-ನಲ್ಲಿ ಓದಿ, ತಮಗೆ ಯಾವುದೋ ದೊಡ್ಡ ರೋಗ ಬಂದಿದೆ ಅಂತ ಭಾವಿಸುವ ರೋಗ ಅದು. ಇದು ಅಂತಹ ವಿರಳವಾದ ರೋಗವೇನೂ ಅಲ್ಲ. ಏಕೆಂದರೆ ವಿಶ್ವದಾದ್ಯಂತ ಗೂಗಲ್-ನಲ್ಲಿ ಪ್ರತಿ ೨೦ ರಲ್ಲಿ ಒಂದು ಹುಡುಕಾಟ ಆರೋಗ್ಯದ ಕುರಿತಾಗಿರುತ್ತದೆ. 

ಹಾಗಿದ್ದರೆ, ನಿಮಗೆ ಸೈಬರ್ ಕಾಂಡ್ರಿಯಾ ರೋಗವಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?!

ಇಲ್ಲಿದೆ ಅದರ ಗುಣಲಕ್ಷಣಗಳು. 

೧. ದಿನಕ್ಕೆ ೧ರಿಂದ ೩ ಘಂಟೆಗಳವರೆಗೆ ನಿಮ್ಮ ರೋಗದ ಗುಣಲಕ್ಷಣಗಳ ಬಗ್ಗೆ ಇಂಟರ್ನೆಟ್-ನಲ್ಲಿ ಓದುತ್ತೀರಿ.

೨. ನಿಮಗೆ ಅನೇಕ ವಿಭಿನ್ನ ಖಾಯಿಲೆಗಳು ಇದೆ ಎಂಬ ಭಯದಲ್ಲಿ ಜೀವಿಸುತ್ತೀರಿ. 

೩. ನೀವು ಅತಿಯಾಗಿ ಆತಂಕಕ್ಕೊಳಗಾದ ದಿನ, ಕನಿಷ್ಠ ಪಕ್ಷ ೩-೪ ಬಾರಿ ನಿಮ್ಮ ರೋಗದ ಬಗ್ಗೆ ಇಂಟರ್ನೆಟ್-ನಲ್ಲಿ ಓದುತ್ತೀರಿ. ಆದರೆ ಸೈಬರ್ ಕಾಂಡ್ರಿಯಾ ಇಂದ ಬಳಲದೇ ಇರುವವರು ಅವರು ಆತಂಕಕ್ಕೊಳಗಾದ ದಿನವೂ ಕೇವಲ ಒಂದು ಬಾರಿ ಓದುತ್ತಾರೆ. 

೪. ನಿಮ್ಮ ರೋಗ ಲಕ್ಷಣಗಳ ಇಂಟರ್ನೆಟ್-ನಲ್ಲಿ ಓದುವಾಗ ನೀವು ಅತಿಯಾದ ಗಾಬರಿಯಲ್ಲಿರುತ್ತೀರಿ. 

೫. ಆದಾಗ್ಯೂ ನಿಮ್ಮ ಅರೋಗ್ಯ ವಾಸ್ತವವಾಗಿ, ವೈದ್ಯಕೀಯವಾಗಿ ಸ್ಥಿರವಾಗಿರುತ್ತದೆ. 

ಅದಕ್ಕೆ ಮದ್ದು ಇಷ್ಟೇ!

ಇಂಟರ್ನೆಟ್, ವೆಬ್-ಸೈಟ್, ಆನ್ಲೈನ್ ಇನ್-ಫಾರ್ಮಶನ್ ಗಳಿಂದ ದೂರವಿರಿ. ಅವುಗಳು ಕೆಲವು ಬಾರಿ ನಿಮ್ಮ ರೋಗವನ್ನು ನೀವೇ ಕಂಡು ಹಿಡಿಯಲು ಸಾಧ್ಯ ಮಾಡಿಕೊಟ್ಟರೂ, ಹಲವು ಬಾರಿ ನಿಮ್ಮ ದಾರಿ ತಪ್ಪಿಸುತ್ತವೆ. ಬಹುಶಃ ಇಂಟೆರ್-ನೆಟ್ ನಿಮ್ಮ ಎಲ್ಲ ರೋಗಗಳಿಗೆ ಉತ್ತರ ಕೊಡುವ ಹಾಗಿದ್ದರೆ, ವೈದ್ಯಕೀಯ ವಿದ್ಯಾರ್ಥಿಗಳು ವರ್ಷಗಟ್ಟಲೇ ಓದಿ ವೈದ್ಯರಾಗಬೇಕಿರಲಿಲ್ಲ. ಹಾಗಾಗಿ ಮುಂದಿನ ಬಾರಿ ನಿಮಗೆ ಯಾವುದೇ ರೋಗ ಬರಲಿ, ಸಣ್ಣದು ಅಥವಾ ದೊಡ್ಡದು, ವೈದ್ಯರನ್ನು ಕೇಳಿ ಔಷಧಿ ಪಡೆಯಿರಿ, ಇಂಟೆರ್-ನೆಟ್ ಅಲ್ಲ!




Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment