Choose Language:

ಭಾರತದ ನಯಾಗರ - ಹೂಗೆನಕಲ್ ಜಲಪಾತ

ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಜೋರಾಗೇ ಸುರಿದಿದೆ. ಎಲ್ಲಾ ನದಿಗಳು ತಮ್ಮ ಒಡಲನ್ನು ತುಂಬಿಕೊಂಡು ಭೋರ್ಗರೆಯುತ್ತಿವೆ. ಜಲಪಾತಗಳು ಸಹ ತಮ್ಮ ಸೌಂದರ್ಯವನ್ನು ಇಮ್ಮಡಿಸಿಕೊಂಡು ನಲಿಯುತ್ತಿವೆ. ದಕ್ಷಿಣ ಭಾರತದಲ್ಲಿರುವ ಹೊಗೆನಕಲ್ ಜಲಪಾತ ಕೂಡಾ ಮೈದುಂಬಿ, ಅಕ್ಷರಶಃ ನಯಾಗರ ಜಲಪಾತದ ಸಾಕ್ಷತ್ಕಾರವಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಹೊಗೇನಕಲ್ ಜಲಪಾತ ಎರಡೂ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

“ಹೊಗೆನಕಲ್” ಎಂಬ ಹೆಸರು ಯಾಕೆ?

ಹೊಗೆನಕಲ್ ಎಂಬ ಹೆಸರು ಎರಡು ಪದಗಳಿಂದ ಮಾಡಲ್ಪಟ್ಟಿದೆ - “ಹೊಗೆ” ಮತ್ತು “ಕಲ್ಲು”. ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟದಲ್ಲಿ ಜನ್ಮ ತಾಳುವ ತಲಕಾವೇರಿ, ಮೆಟ್ಟೂರು ಜಲಾಶಯ ಸೇರುವ ಮುನ್ನ ತಮಿಳುನಾಡಿನೊಳಗೆ ಪ್ರವೇಶಿಸುವ ಸ್ಥಳವಿದು. ಭೋರ್ಗರೆಯುವ ನದಿಯ ನೀರು ಜಲಪಾತವಾಗಿ ಧುಮ್ಮಿಕ್ಕುತ್ತದೆ. ನೀರಿನ  ಮೇಲೇಳುವ ಹೊಗೆಯ ಕಾರಣದಿಂದ ಈ ಜಲಪಾತಕ್ಕೆ “ಹೊಗೇನಕಲ್” ಎಂಬ ಹೆಸರು ಪ್ರಾಪ್ತಿಯಾಗಿದೆ. ತಮಿಳುನಾಡಿನ ಜನರು ಈ ಜಲಪಾತಕ್ಕೆ ಮರಿಕೊಟ್ಟಾಯಂ ಎಂದು ಕರೆಯುತ್ತಾರೆ. ಭಾರತದಲ್ಲಿ ಈ ಜಲಪಾತ “ಭಾರತದ ನಯಾಗರ” ಎಂದು ಪ್ರಖ್ಯಾತಿ ಪಡೆದಿದೆ.  

ಹೊಗೆನಕಲ್-ನಲ್ಲಿ ಏನೇನಿದೆ?

ಅಲ್ಲಿನ ಚೆಂದದ ಪರಿಸರ, ಧೋ ಎಂದು ಧುಮ್ಮಿಕ್ಕುವ ನೀರು, ನಿರಂತರ ಗುಡುಗಿನಂತೆ ಗುಡುಗುವ ಜಲಪಾತ, ನೀರಿನ ರಭಸಕ್ಕೆ ಸಿಡಿದೇಳುವ ಹೊಗೆ, ಅಲ್ಲಿನ ವ್ಯೂ ಪಾಯಿಂಟ್-ಗಳು ಎಲ್ಲವೂ ಮನೋಲ್ಲಾಸ ನೀಡುತ್ತದೆ. 

ಎಲ್ಲೆಂದರಲ್ಲಿ ನೀರಿನಲ್ಲಿ ಇಳಿಯುವ ಅವಕಾಶ ಇಲ್ಲದಿದ್ದರೂ,ನೀರಿನೊಳಗೆ ಇಳಿಯುವ ಬಯಕೆ ಇದ್ದರೆ, ಜಲಪಾತದಡಿಯವರೆಗೆ ಕರೆದೊಯ್ಯುವ ನುರಿತ ತೆಪ್ಪದವರಿದ್ದಾರೆ. ಜಲಧಾರೆಯ ತಳಭಾಗದಲ್ಲಿ ಯಾರೋ ತರಾತುರಿಯಲ್ಲಿ ಕೆತ್ತಿಹೋದಂತಿರುವ ಬಂಡೆಗಲ್ಲುಗಳು ನಿಮ್ಮನ್ನು ಆಕರ್ಷಿಸಿ, ವಿಶಿಷ್ಟ ಅನುಭವ ನೀಡುವುದು ಖಂಡಿತ. 

ತೆಪ್ಪ ನೀರಿಗಿಳಿಯದ ಬಿರುಮಳೆಯ ಸಮಯದಲ್ಲಿ, ನದಿ ದಡದಲ್ಲಿ ಅಡ್ಡಾಡಿ, ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ವಿಶಾಲವಾದ ಜಾಗವಿದೆ. ಮನಸ್ಸಿಗೆ ಮುದ ನೀಡುವಂತಹ ಪುಟ್ಟದೊಂದು ದೇವಸ್ಥಾನವಿದೆ. ಹೊಟ್ಟೆ ಹಸಿದಾಗ, ನಿಮ್ಮ ಹಸಿವನ್ನು ಇಂಗಿಸಲು ಸಣ್ಣ-ಪುಟ್ಟ ಹೋಟೆಲ್-ಗಳಿವೆ. ಐಷಾರಾಮಿ ಬಯಸುವವರಿಗೆ, ಅದರ ಸೌಲಭ್ಯವೂ ಇದೆ. ಅಲ್ಲಿ ಮಾಡುವ ಮಾಡುವ ಮಸಾಜ್ ಕೂಡಾ ಹೆಸರುವಾಸಿಯಂತೆ. 

ಹೊಗೆನಕಲ್ ತಲುಪುವುದು ಹೇಗೆ?

ಹೊಗೆನಕಲ್ ಕರ್ನಾಟಕದ ಬೆಂಗಳೂರಿನಿಂದ ಸರಿಸುಮಾರು ೧೮೦ ಕಿ.ಮೀ. ಹಾಗೂ ತಮಿಳುನಾಡಿನ ಧರ್ಮಪುರಿಯಿಂದ ೪೬ ಕಿ.ಮೀ. ದೂರದಲ್ಲಿದೆ. ಎರಡು ರಾಜ್ಯಗಳಿಂದ ರಸ್ತೆ ಸಂಪರ್ಕವಿದೆ. ಆದರೆ, ಕರ್ನಾಟಕದಿಂದ ಸಾರಿಗೆ ವ್ಯವಸ್ಥೆ ವಿರಳ. ಹಾಗಾಗಿ ಕರ್ನಾಟಕದಿಂದ ಹೊಗೆನಕಲ್-ಗೆ ಹೋಗುವವರು ತಮ್ಮದೇ ಸ್ವಂತ ವಾಹನದಲ್ಲಿ ತೆರಳುವುದು ಸೂಕ್ತ. 




Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment