Choose Language:

ಕಲ್ಪಲ್ಲಿ ಸ್ಮಶಾನ - ಆತ್ಮಗಳ ತಾಣ

ಮನುಷ್ಯನ ಆಲೋಚನೆಗಳಿಗೆ, ವಿವರಣೆಗಳಿಗೆ ನಿಲುಕದೇ ಇರುವಂತದ್ದು ಈ ಜಗತ್ತಿನಲ್ಲಿ ಸಾಕಷ್ಟಿವೆ. ಅಂತಹ ವಿಷಯಗಳಲ್ಲಿ ಒಂದು - ಭೂತ, ಪ್ರೇತ, ಪಿಶಾಚಿ! ಅವುಗಳು ಕೇವಲ ನಮ್ಮ ಕಲ್ಪನೆಯೇ? ಅಥವಾ ಅವುಗಳೂ ಸಹ ಈ ಜಗತ್ತಿನಲ್ಲಿ ಅಸ್ಥಿತ್ವವನ್ನು ಹೊಂದಿದೆಯೇ? ಈ ಪ್ರಶ್ನೆಗಳನ್ನು ಉತ್ತರಿಸುವುದು ಕಷ್ಟವಾದರೂ, ಅವುಗಳ ಅಸ್ಥಿತ್ವವನ್ನು ಸಮರ್ಥಿಸುವ ಕೆಲವು ಸ್ಥಳಗಳಿವೆ. ಬೆಂಗಳೂರಿನಲ್ಲಿರುವ ಅಂತಹ ಸ್ಥಳಗಳಲ್ಲಿ ಒಂದು - ಸರ್ವಜ್ಞ ನಗರದ ಕಲ್ಪಲ್ಲಿ ಸ್ಮಶಾನ 

ಸ್ಮಶಾನ ಎಂದರೆ ಆತ್ಮಗಳ ತಾಣ. ಇದನ್ನು ನೀವು ಹಲವು ಚಲನಚಿತ್ರಗಳಲ್ಲಿ ನೋಡಿಯೋ ಅಥವಾ ನಿಮ್ಮ ಅನುಭವದಿಂದಲೋ ಅರಿತಿರುತ್ತೀರಿ. ಕಲ್ಪಲ್ಲಿ ಸ್ಮಶಾನ ಬೆಂಗಳೂರಿನ ಅತೀ ದೊಡ್ಡ ಸ್ಮಶಾನಗಳಲ್ಲಿ ಒಂದು. ಇಲ್ಲಿ ಪ್ರತಿದಿನ ಸರಾಸರಿ ೧೦ ಶವಗಳನ್ನು ಸಮಾಧಿ ಮಾಡಲಾಗುತ್ತದೆ. ಇದೇ ಭಯ ಹುಟ್ಟಿಸುವ ಸಂಗತಿ ಆದರೂ, ಇನ್ನೂ ಭಯ ಹುಟ್ಟಿಸುವ ಸಂಗತಿ ಎಂದರೆ ಹಗಲು-ರಾತ್ರಿ ಎನ್ನದೇ ಇಲ್ಲಿ ಒಬ್ಬ ಭಯಾನಕ ಮನುಷ್ಯ ನೆಲ ಅಗೆಯುವುದನ್ನು ಸುತ್ತಮುತ್ತಲಿನ ಜನ ನೋಡಿ ಬೆಚ್ಚಿದ್ದಾರೆ. ಇನ್ನು ಕೆಲವರು ಸಮಾಧಿಯಿಂದ ಆತ್ಮಗಳು ಎದ್ದು ಕುಳಿತಿರುವುದನ್ನೂ ನೋಡಿದ್ದಾರೆ. ಮತ್ತಿತರರಿಗೆ, ಯಾರೋ ಬಂದು ನಿಂತಂತೆ, ಮಾತನಾಡಿಸಿದಂತೆ ಭಾಸವಾಗಿದೆ. ಅನೇಕರು ಹೇಳುವ ಪ್ರಕಾರ, ಈ ಸ್ಮಶಾನದಲ್ಲಿ ಅಪೂರ್ವ ಸುವಾಸನೆಯ ಅನುಭವವಾಗುತ್ತದೆ ಅಂತೆ. 

ಇವೆಲ್ಲವುಗಳನ್ನು ಕೇಳಿದರೆ ಅದಕ್ಕೆ ವೈಜ್ಞಾನಿಕ ವಿಶ್ಲೇಷಣೆಗಳು ಏನು ಎನ್ನುವ ಪ್ರಶ್ನೆ ಉಂಟಾಗುವುದು ಸಹಜ. ವೈಜ್ಞಾನಿಕವಾಗಿ ಅದನ್ನು ವಿಶ್ಲೇಷಿಸಲಾಗದೇ ಇದ್ದಾಗ, ಅದು ಅಲೌಕಿಕವೇ? ಎನ್ನುವ ಪ್ರಶ್ನೆ ಉದ್ಭವಿಸುವುದೂ ಅಷ್ಟೇ ಸಹಜ. ಆದರೇ ಅದಕ್ಕೆ ಉತ್ತರಗಳನ್ನು ನಾವು ಇನ್ನೂ ಕಂಡುಕೊಳ್ಳಬೇಕಿದೆ!

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment