Choose Language:

ಲಂಡನ್ ನ ರಾಜಮನೆತನ ಈಗಲೂ ಬದುಕುಳಿಯಲು ಕಾರಣವೇನು?

ಯಾರ ಆಳ್ವಿಕೆಯನ್ನೂ ಸಹಿಸದ ಈ ಕಾಲದಲ್ಲಿ ಬ್ರಿಟನ್ನಿಗರಲ್ಲಿ ಲಂಡನ್ ರಾಜಮನೆತನದ ಬಗ್ಗೆ ಏಕೆ ಬೇಸರ ಅಥವಾ ಆಕ್ಷೇಪವಿಲ್ಲ? “ಬ್ರಿಟನ್ ಸೂರ್ಯ ಮುಳುಗದ ನಾಡು” ಎಂದು ಕರೆಯಲು ಎಷ್ಟು ಕಾರಣಗಳಿದ್ದವೋ, ಅದಕ್ಕಿಂತ ಹೆಚ್ಚಿನ ಕಾರಣಗಳು ಈ ರಾಜಮನೆತನವನ್ನು ಪ್ರೀತಿಯಿಂದ ಒಪ್ಪಿಕೊಳ್ಳಲು ಇದೆ. 

ತೊಂಬತ್ತೆರಡು ವರ್ಷದ ರಾಣಿ ಎಲಿಜೆಬೆತ್ ಯಾವುದೇ ದಣಿವಿಲ್ಲದೆ ತನ್ನ ಜನರ ಒಳಿತಿಗಾಗಿ ದುಡಿಯುತ್ತಾರೆ. ರಾಜಮನೆತನದವರ ಜೀವನ ಕ್ರಮದ ಮೂಲಭೂತ ಮೌಲ್ಯಗಳಾದ ನಿಷ್ಠುರ ಕರ್ತವ್ಯ ಪ್ರಜ್ಞೆ ಮತ್ತು ಧರ್ಮಶೀಲತೆಯನ್ನು, ಯಾವುದೇ ಬಗೆಯ ಕಲ್ಮಶವಿಲ್ಲದೇ, ರಾಜಮನೆತನದವರು ಇಂದಿಗೂ ಪಾಲಿಸುತ್ತಾರೆ ಮತ್ತು ಪ್ರತಿನಿಧಿಸುತ್ತಾರೆ. ಪಾರದರ್ಶಕತೆ ಅವರ ಜೀವನದಲ್ಲಿ ಬೆರೆತು ಹೋಗಿದೆ. ಇದು ಇಂದು, ನೆನ್ನೆಯ ಮಾತಲ್ಲ. ಸರ್ವಾಧಿಕಾರ ಇಡೀ ಜಗತ್ತಿನಲ್ಲಿಯೇ ತಲೆಯೆತ್ತಿ, ಬೊಬ್ಬರಿಸಿ ಕೇಕೆ ಹೊಡೆಯುತ್ತಿರುವಾಗ, ಪ್ರಶಾಂತವಾಗಿ ತನ್ನದೇ ಬಗೆಯಲ್ಲಿ ತನ್ನ ಜನರ ಒಳಿತಿಗಾಗಿ ದುಡಿಯುತ್ತಿದ್ದ ರಾಜಮನೆತನ ಕಥೆ ಇದು. ಹೀಗಿರುವಾಗ ಜನಸಾಮಾನ್ಯರು ರಾಜಮನೆತನದ ಸುಖ-ದುಃಖದಲ್ಲಿ ಪಾಲ್ಗೊಳ್ಳದೇ ಇರುತ್ತಾರೆಯೇ? ರಾಜಮನೆತನದ ಬಗ್ಗೆ ಜನರ ಮನಸ್ಸಿನಲ್ಲಿ ಅಭಿಮಾನ ಉಳಿಯದೇ ಇದ್ದೀತೆ?

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment