Choose Language:

ಅಂಚೆಗೆ ಹೋಗದ ಪತ್ರ - ಜೀವನದ ಸಣ್ಣ ಪುಟ್ಟ ವಿಷಯಗಳ ಸಂಗ್ರಹ

ಗೆಳೆಯರೊಬ್ಬರ ಸಲಹೆಯ ಮೇರೆಗೆ ಮಾತ್ರಿಯಾ ರಾ ಅವರ ಪುಸ್ತಕ, “ಅಂಚೆಗೆ ಹೋಗದ ಪತ್ರ”ವನ್ನು ಖರೀದಿಸಿದೆ. 

“ಯಶಸ್ಸು ದೊಡ್ಡ ದೊಡ್ಡ ವಿಷಯಗಳಲ್ಲಿರುತ್ತವೆ. 

ಆನಂದ ಸಣ್ಣ ಸಣ್ಣ ವಿಷಯಗಳಲ್ಲಿರುತ್ತವೆ. 

ಧ್ಯಾನ ಯಾವುದರಲ್ಲೂ ಇರುವುದಿಲ್ಲ 

ದೇವ ಎಲ್ಲದರಲ್ಲೂ ಇರುತ್ತಾನೆ. 

ಇದೇ ಜೀವನ.” 

ಪುಸ್ತಕದ ಹಿಂದಿರುವ ಈ ಸಾಲುಗಳು ಸಹಜವಾಗಿಯೇ ಈ ಪುಸ್ತಕವನ್ನು ಓದಲು ಪ್ರಚೋದಿಸುತ್ತಿತ್ತು. ದೈನಂದಿನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಪುಸ್ತಕ ಓದಲು ಅಂತಲೇ ಸಮಯ ಮಾಡಿಕೊಂಡು, ಓದಲು ಪ್ರಾರಂಭಿಸಿದೆ. ಸಣ್ಣ ಸಣ್ಣ ಜೀವನದ ಸಂಗತಿಗಳನ್ನು ಸೂಕ್ತವಾಗಿ ವಿವರಿಸಿ, ಅದನ್ನು ಅಗತ್ಯವಿರುವ ರೀತಿಯಲ್ಲಿ ನಿರ್ವಹಿಸಿ, ಅದರಿಂದ ಕಲಿಯಬೇಕಾದ ಪಾಠಗಳನ್ನು ನಮ್ಮ ಜೀವನಕ್ಕೆ, ನಮ್ಮ ಇಂದಿನ ಜೀವನಶೈಲಿಗೆ, ನಮ್ಮ ಯೋಚನಾಶಕ್ತಿಗೆ ಅನುಗುಣವಾಗುವಂತೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪ್ರತಿ ಜೀವನದ ಪಾಠಗಳು ಕೇವಲ ೨-೩ ಪುಟಗಳಿದ್ದು, ಚಿಕ್ಕದಾಗಿ, ಚೊಕ್ಕವಾಗಿ ನಮ್ಮ ವ್ಯಕ್ತಿತ್ವ ಬೆಳವಣಿಗೆ, ಸಮಯ ನಿರ್ವಹಣೆ, ಸಂಬಂಧಗಳ ಸಮತೋಲನ ಮತ್ತು ಸುಧಾರಣೆ, ಪರರ ಬಗ್ಗೆ ಅನುಭೂತಿ, ಈ ರೀತಿ ಹಲವಾರು ಜೀವನದ ಮೂಲತತ್ವಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಹಲವರಿಗೆ ಇಂತಹ ಉತ್ತಮವಾದ ಕಿರುಬರವಣಿಗೆಗಳು ತೃಪ್ತಿ ನೀಡಿದರೂ, ಗುಣಾತ್ಮಕ ಬರವಣಿಗೆಯಲ್ಲಿ ವಿವರಣಾತ್ಮಕತೆಯನ್ನು ಬಯಸುವ ನನ್ನಂತಹವರಿಗೆ ಈ ಪುಸ್ತಕ ಇನ್ನೂ ಸಮಗ್ರವಾಗಿ ವ್ಯಕ್ತವಾಗಬಹುದಿತ್ತೇನೋ ಎನ್ನಿಸುತ್ತದೆ. 

Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment