Choose Language:

ನಾವು ಫಾದರ್ಸ್ ಡೇ ಏಕೆ ಆಚರಿಸುತ್ತೇವೆ?

ಇವತ್ತು ಫಾದರ್ಸ್ ಡೇ/ಅಪ್ಪಂದಿರ ದಿನ. ಎಲ್ಲರೂ ಬಗೆ ಬಗೆಯ ರೀತಿಯಲ್ಲಿ ಆಚರಿಸುತ್ತೇವೆ. ಕೆಲವರು ತಮ್ಮ ತಂದೆಗೆ ಉಡುಗೊರೆ ಕೊಟ್ಟು ಆಚರಿಸಿದರೆ, ಇನ್ನು ಕೆಲವರು ವಿಶೇಷವಾದ ರೀತಿಯಲ್ಲಿ ತಂದೆಯನ್ನು ಸ್ಮರಿಸಿ ಹಾಡಿ ಹೊಗಳುತ್ತಾರೆ. ಆದರೆ ಈ ಫಾದರ್ಸ್ ಡೇ ಹಿಂದಿನ ಹಿಸ್ಟರಿ/ಮಿಸ್ಟರಿ ಏನು ಅಂತ ಹಲವರಿಗೆ ತಿಳಿದಿರುವಿದಿಲ್ಲ. ಇಲ್ಲಿದೆ ಅದರ ಮಾಹಿತಿ. 

ಮೊದಲು ಶುರುವಾದದ್ದು ಮದರ್ಸ್ ಡೇ/ತಾಯಂದಿರ ದಿನ. ಆಗ ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ತಮ್ಮ ಅಮ್ಮನಿಗೆ ಉಡುಗೊರೆ ಕೊಟ್ಟು, ಆಕೆಯ ತ್ಯಾಗ, ಸಹನೆಗಳ ಬಗ್ಗೆ ಪ್ರಶಂಸಿಸುತ್ತಿದ್ದರು. ತಂದೆಯಂದಿರಿಗೆ ಯಾವದೇ ದಿನ ಎನ್ನುವುದು ಎಲ್ಲ ಅಪ್ಪಂದಿರಿಗೂ ಅಸಮಾಧಾನ ಇದ್ದರೂ, ಅದನ್ನು ಯಾರೂ ಹೇಳಿಕೊಳ್ಳುತ್ತಿರಲಿಲ್ಲ. 

ಹೀಗಿರುವಾಗ ವಾಷಿಂಗ್ಟನ್, ಅಮೆರಿಕಾದ ಸೋನಾರ ಸ್ಮಾರ್ಟ್ ದೊಡ್ ಎನ್ನವವರು ತಮ್ಮ ತಂದೆ, ವಿಲಿಯಂ ಜ್ಯಾಕ್ಸನ್ ಸ್ಮಾರ್ಟ್ ಅವರ ಜನ್ಮ ದಿನವನ್ನು ಫಾದರ್ಸ್ ಡೇಯಾಗಿ ಆಚರಿಸಬೇಕೇಂದು ನಿರ್ಧರಿಸಿದರಂತೆ. ತಕ್ಷಣವೇ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್-ನಲ್ಲಿ (ವೈ.ಎಂ.ಸಿ.ಎ.) ಪ್ರಸ್ತಾಪಿಸಿದಾಗ, ಆ ಸಂಘಟನೆಯವರು ಅದಕ್ಕೆ ಸೂಕ್ತ ಕಾರಣ ಕೇಳಿದ್ದಾರೆ. ಆಗ ಸೋನಾರ ದೊಡ್ ತನ್ನ ತಂದೆ ಹಾಗು ತನ್ನ ಜೀವನದ ಬಗ್ಗೆ ಎಲ್ಲರೆದುರು ಬಿಚ್ಚಿಟ್ಟಿದ್ದಾರೆ. 

ವಿಲಿಯಂ ಜ್ಯಾಕ್ಸನ್ ಸ್ಮಾರ್ಟ್ ಮಹಾಯುದ್ಧದಲ್ಲಿ ಶೂರರಾಗಿ ಕಾರ್ಯ ನಿರ್ವಹಿಸಿದವರು. ಅವರಿಗೆ ಆರು ಮಕ್ಕಳು. ಆರನೇ ಡೆಲಿವರಿಯ ಸಮಯದಲ್ಲಿ, ಯಾವುದೊ ವೈದ್ಯಕೀಯ ಸಮಸ್ಯೆಯಿಂದಾಗಿ ತಾಯಿ ತೀರಿಹೋದರು. ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಘಟನೆ ನಡೆದರೆ, ಸಾವಿನ ಬಗ್ಗೆ ಸ್ವಲ್ಪ ದಿನ ಶೋಕಿಸಿ, “Life should move on” ಎನ್ನುವ ತತ್ವದೊಂದಿಗೆ ಇನ್ನೊಂದು ಮದುವೆ ಮಾಡಿಕೊಂಡು ಸುಖವಾಗಿರುತ್ತಾರೆ. ಆದರೆ, ವಿಲಿಯಂ ತನ್ನ ಸುಖಕ್ಕಿಂತ ಮಕ್ಕಳ ಸುಖದ ಬಗ್ಗೆ ಯೋಚಿಸುತ್ತಿದ್ದರು. ಆದ್ದರಿಂದ ತಾವು ಎರಡನೇ ಮದುವೆ ಮಾಡಿಕೊಳ್ಳದೇ, ತಾವೇ ಸ್ವತಃ ತಮ್ಮ ಮಕ್ಕಳನ್ನು ಸಾಕಿ ಸಲುಹಿದರು. ಇದು ಸಹಜವಾಗಿ ಸೋನಾರ ಅವರಲ್ಲಿ ತಮ್ಮ ತಂದೆಯ ಬಗ್ಗೆ ಅಪಾರವಾದ ಪ್ರೀತಿ, ಗೌರವ ಮೂಡಿಸಿತ್ತು. ಇದೇ ಕಾರಣದಿಂದ ಸೋನಾರ ತಮ್ಮ ತಂದೆಯ ಜನ್ಮ ದಿನವನ್ನು ಅಪ್ಪಂದಿರ ದಿನವಾಗಿ ಆಚರಿಸಬೇಕು ಎಂದು ಕೋರಿಕೊಂಡಿದ್ದರು. ಆದರೆ ಅಷ್ಟು ತುರ್ತಾಗಿ ಆಚರಿಸಲು ವೈ.ಎಂ.ಸಿ.ಎ. ಅವರು ಒಪ್ಪದೇ, ಜೂನ್ ತಿಂಗಳ ಮೂರನೇ ಭಾನುವಾರವನ್ನು ಅಪ್ಪಂದಿರ ದಿನವಾಗಿ ಆಚರಿಸಬಹುದು ಎಂದು ಘೋಷಿದರು. ಸೋನಾರ ಅದರ ಬಗ್ಗೆ ಎಲ್ಲಾ ಕಡೆಯೂ ಪ್ರಚಾರಿಸಿದರು. ಅದರ ಬಂಬಲಕ್ಕೆ ಟೈ ಕಂಪನಿಯವರು, ತಂಬಾಕಿನವರು, ಸೂಟ್ ಕಂಪನಿಯವರು, ಗ್ರೀಟಿಂಗ್ಸ್ ಮಾರೋ ಕಂಪನಿಯವರು, ಎಲ್ಲರೂ ಬಂದರು. ಏಕೆಂದರೆ ಸಹಜವಾಗಿ ಈ ಆಚರಣೆಯಿಂದ ಅವರಿಗೇ ಅತಿಯಾದ ಲಾಭ. ಈ ಕಂಪನಿಗಳಿಗೆ ಅಪ್ಪಂದಿರ ದಿನದಂದು ಸರಿಸುಮಾರು ಒಂದು ಬಿಲಿಯನ್-ನಷ್ಟು ವ್ಯವಹಾರವಾಗುತ್ತದೆ. ೧೯ ಜೂನ್, ೧೯೧೦ ರಂದು ಸೋನಾರ ಅವರ ಬಯಕೆಯಂತೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಆದರೆ ಅಪ್ಪಂದಿರ ದಿನವನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. 

ಅಮೆರಿಕಾದ ೩೬ನೇ ಅಧ್ಯಕ್ಷರಾದ ಲಿಂಡನ್ ಬಿ. ಜಾನ್-ಸನ್ ೧೯೬೩ರಿಂದ ೧೯೬೯ರವರೆಗೆ ಆಳ್ವಿಕೆ ನಡೆಸಿದರು. ೧೯೬೩ರಲ್ಲಿ ಫಾದರ್ಸ್ ಡೇಯನ್ನು ಪ್ರತಿ ಜೂನ್ ತಿಂಗಳ ೩ನೇ ಭಾನುವಾರದಂದು ಆಚರಿಸಬಹುದು ಎಂದು ಅಧಿಕೃತವಾಗಿ ಘೋಷಿಸಿದರು. ಈ ರೀತಿ ಅಮೇರಿಕಾದಲ್ಲಿ ಶುರುವಾದ ಆಚರಣೆ, ಕಾಲಕ್ರಮೇಣ, ನಮ್ಮ ಭಾರತ ದೇಶದಲ್ಲಿಯೂ ಹಬ್ಬಿತು. ಇದೇ ನಾವು ಆಚರಿಸುವ ಫಾದರ್ಸ್ ಡೇಯ ಇತಿಹಾಸ. 




Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment