Choose Language:

ಅಭಿವ್ಯಕ್ತಿ ಇಲ್ಲದ ಪ್ರೀತಿಯೇ?

“ಪ್ರೀತಿ ಮತ್ತು ಅದರ ಅಭಿವ್ಯಕ್ತಿ ಒಂದರಲ್ಲೊಂದು ಬೆಸೆದುಕೊಂಡಿದೆ. ಅವೆರಡೂ ಒಂದಕ್ಕೊಂದು ಆಸರೆ ನೀಡುತ್ತವೆ. ಪ್ರೀತಿಗೆ ಅಭಿವ್ಯಕ್ತಿಯ ರೂಪವಿರದಿದ್ದರೆ, ಪ್ರೀತಿಯ ಅಸ್ಥಿತ್ವವನ್ನು ಗುರುತಿಸುವುದು ಹೇಗೆ? “ನಾನು ನಿನ್ನನ್ನು ಪ್ರೀತಿಸುತ್ತೇನೆ ಕಣೇ! ಆದರೆ, ನಾನು ಅದನ್ನು ವ್ಯಕ್ತಪಡಿಸುವುದಿಲ್ಲ!” ಎಂದರೆ ಆ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಹೌದು, ನಾನೂ ಒಪ್ಪಿಕೊಳ್ಳುತ್ತೇನೆ, ಪ್ರೀತಿ-ಪ್ರೇಮಕ್ಕೆ ಒಂದು ನಿರ್ದಿಷ್ಟ ಅಭಿವ್ಯಕ್ತಿಯ ಬಗೆ ಇರುವುದಿಲ್ಲ. ಅದು ವಯಸ್ಸಿಗೆ ತಕ್ಕಂತೆ, ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಕೆಲವು ಬಾರಿ ಅದು ಪದಗಳ ರೂಪ ಪಡೆದರೆ, ಇನ್ನುಳಿದ ಬಾರಿ ಅದು ಕ್ರಿಯೆ ಅಥವಾ ವರ್ತನೆಯ ರೂಪದಲ್ಲಿ ವ್ಯಕ್ತವಾಗಬಹುದು. ಆದರೆ, ಆ ಮನುಷ್ಯನ ವರ್ತನೆ, ಮನಸ್ಸಿನಲ್ಲಿರುವ ಪ್ರೀತಿಗೆ ಪೂರಕವಾಗದೇ, ಕೇವಲ ಪದಗಳಲ್ಲಿ, “ನಾನು ನಿನ್ನನ್ನು ನನ್ನ ಮನಸ್ಸಿನಲ್ಲಿಯೇ ಪ್ರೀತಿಸುತ್ತೇನೆ. ಆದರೆ ಅದನ್ನು ವ್ಯಕ್ತಪಡಿಸುವುದಿಲ್ಲ!” ಎಂದರೆ ಅಂತಹ ಪ್ರೀತಿಯನ್ನು ನಂಬಬೇಕೆ? ಒಪ್ಪಿಕೊಳ್ಳಬೇಕೇ? ಆರಾಧಿಸಬೇಕೇ? ಅಥವಾ ಆ ಮನುಷ್ಯ ನನ್ನನ್ನು ಪ್ರೀತಿಸುವುದಿಲ್ಲ ಎಂದು ಬೇಸರಿಸಿಕೊಳ್ಳಬೇಕೇ? ಅಥವಾ ಸಂಪೂರ್ಣವಾಗಿ ಅಂತಹವನನ್ನು ನಿರ್ಲಕ್ಷಿಸಬೇಕೇ?” ಎಂದು ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಗೆಳತಿಯೊಬ್ಬಳು ಕೇಳಿದಾಗ, ನಾನು ಏನು ಹೇಳಬೇಕು ಎಂದು ತಿಳಿಯದೇ ಮಂಕಾದೆ!




Rate your review

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

comments

leave a comment