Choose Language:

ಭಾರತದ ರೆಡ್ ಲೈಟ್ ಏರಿಯಾ - ವೇಶ್ಯೆಯರ ಅಡ್ಡ

ವೇಶ್ಯಾವಾಟಿಕೆ ಎನ್ನುವುದು ನೂರಾರು ವರ್ಷಗಳಿಂದ ಅಸ್ಥಿತ್ವದಲ್ಲಿರುವ ಪಿಡುಗು. ಇದು ಕೆಲವರ ಆದಾಯದ ಮೂಲವಾಗಿದ್ದರೇ, ಕೆಲವರಿಗೆ ಇದು ಸಂತೋಷದ ಮೂಲ, ಇನ್ನುಳಿದವರಿಗೆ ಇದು ಅನಿವಾರ್ಯತೆ. ಅದೇನೇ ಇದ್ದರೂ ಕೆಲವು ದೇಶಗಳ ಕಾನೂನು ವ್ಯವಸ್ಥೆ ಈ ವೇಶ್ಯಾವಾಟಿಕೆಯನ್ನು ಕಾನೂನುಬದ್ಧವಾಗಿ ಒಪ್ಪಿಕೊಂಡು, ಅದಕ್ಕೆಂದೇ ಕೆಲವು ಸ್ಥಳಗಳನ್ನು ಮೀಸಲಿಟ್ಟಿದೆ. ಅಂತಹ ಸ್ಥಳಗಳನ್ನು “ರೆಡ್ ಲೈಟ್ ಏರಿಯಾ” ಎಂದು ಕರೆಯುತ್ತಾರೆ. ಅಂತಹ ಪ್ರದೇಶಗಳು ಭಾರತದಲ್ಲಿಯೂ ಇವೆ. ಕೊಲ್ಕತ್ತಾದ ಶೊನಗಾಚಿ, ಮುಂಬಯಿಯ ಕಾಮಾಟಿಪುರ, ನಾಗ್ಪುರದ ಗಂಗಾ ಜಮುನಾ, ವಾರಣಾಸಿಯ ಶಿವದಾಸಪುರ, ಮುಜಾಫರ್-ಪುರದ ಚತುರಬುಜಸ್ಥಾನ್, ಅಲಹಾಬಾದ್ ನ ಮೀರಾಗಾಂಜ್, ಇತ್ಯಾದಿ. 

ಅತ್ಯಂತ ಹಳೆಯ ಹಾಗೂ ಅಪಾಯಕಾರಿ ರೆಡ್ ಲೈಟ್ ಏರಿಯಾ ಎಂದೇ ಕುಖ್ಯಾತಿ ಪಡೆದಿರುವ ಶೋನಗಾಚಿಯಲ್ಲಿ ಇತರ ಪ್ರದೇಶಗಳಿಗಿಂತ ಅಪಾರಾಧಗಳ ಸಂಖ್ಯೆ ಹೆಚ್ಚು. ಭಾರತದೆಲ್ಲೆಡೆಯಿಂದ ಅಪಹರಿಸಲ್ಪಟ್ಟ ಹೆಣ್ಣು ಮಕ್ಕಳನ್ನು ಬಳಸಿಕೊಂಡು  ಇಲ್ಲಿರುವ ಒಂದಕ್ಕೊಂದು ಅಂಟಿಕೊಂಡಿರುವ ಕಟ್ಟಡಗಳಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಾರೆ. ಏಷಿಯಾದ ಎರಡನೇ ಅತೀ ದೊಡ್ಡ ವೇಶ್ಯವಾಟಿಕೆ ಅಡ್ಡ ಕಮಾಟಿಪುರದಲ್ಲಿ ಸಹ ಅಪರಾಧಗಳ ಸಂಖ್ಯೆ ಹೆಚ್ಚು. ಈ ಪ್ರದೇಶವನ್ನು “ಕೆಂಪು ಮಾರ್ಗ” ಎಂದೇ ಕರೆಯುತ್ತಾರೆ. 

ಭಾರತದಲ್ಲಿ ವೇಶ್ಯಾವಾಟಿಕೆಗೆ ಕಾನೂನುಬದ್ಧವಾಗಿ ಅನುಮತಿ ನೀಡಲಾಗಿದೆ. ಆದರೆ ವೇಶ್ಯಾಗೃಹಗಳು (ಬ್ರೊಥೆಲ್ಸ್) ಅಥವಾ ಬೇರೆಯವರ ಮೂಲಕ ವೇಶ್ಯಾವಾಟಿಕೆ (ತಲೆಹಿಡಿಕುತನ) ನಡೆಸುವುದು ಭಾರತದಲ್ಲಿ ಅಪರಾಧ. ಈ ರೀತಿಯ ಅನುಮತಿಯಿಂದ ಬಡವರಿಗೆ ಅಥವಾ ಸ್ವಇಚ್ಛೆಯಿಂದ ವೇಶ್ಯಾವಾಟಿಕೆ ಮಾಡುವವರಿಗೆ ಆಗುವ ಲಾಭಕ್ಕಿಂತ ಸಮಾಜಕ್ಕೆ ಉಂಟಾಗುವ ತೊಂದರೆಗಳ ಸಂಖ್ಯೆ ಹೆಚ್ಚು. ಕಾನೂನುಬದ್ಧವಾದ ಅನುಮತಿಯಿಂದ ಸೆಕ್ಸ್ ವರ್ಕರ್ಸ್ (ಲೈಂಗಿಕ ಕಾರ್ಯಕರ್ತರು) ಗೆ ಆರ್ಥಿಕ ಭದ್ರತೆ ದೊರೆತರೂ, ಹೆಣ್ಣು ಮಕ್ಕಳ ಸಾಗಾಣಿಕೆ, ಮಕ್ಕಳ ಮೇಲಿನ ದೌರ್ಜನ್ಯ, ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳುವುದು - ಈ ರೀತಿಯ ಹಲವು ಸಾಮಾಜಿಕ ಸಮಸ್ಯೆಗಳು ತಲೆದೂರುತ್ತವೆ. ಈ ರೀತಿ ವೇಶ್ಯಾವಾಟಿಕೆಯ ಸುತ್ತ ಒಂದ್ಕಕೊಂಡು ಹೊಸೆದುಕೊಂಡಿರುವ ಸಮಸ್ಯೆಗಳನ್ನು, ಈ ಸಮಾಜದ ಭಾಗವಾಗಿರುವ ನಾವು ಹೇಗೆ ತುಳಿದು, ಎದ್ದು ನಿಲ್ಲಬೇಕು ಎನ್ನುವುದರ ಬಗ್ಗೆ ಗಮನಹರಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. 

Rate your review

comments

leave a comment

Facing Same Issue?

Consectetur adipisicing elit, sed do eiusmod tempor incididunt ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.

Write to us