Choose Language:

ಲಂಡನ್ನಲ್ಲಿನ ರಾಟ್ವೀಲರ್ - "ಕೇಸಿ"

ಲಂಡನ್-ಗೆ ಹೋದ ಮೊದಲ ತಿಂಗಳು, ಗಂಡನೊಂದಿಗೆ ಹೊಸ ಮನೆ ಹುಡುಕುವ ಕಾರ್ಯಕ್ರಮ ನಡೆದಿತ್ತು. ಇಂಟರ್ನೆಟ್ ನಲ್ಲಿ ನೋಡಿ ಒಂದ್ಯಾವುದೋ ಸ್ಟುಡಿಯೋ ಫ್ಲಾಟ್ ಇಷ್ಟವಾಯಿತು. ಸರಿ, ಭಾನುವಾರ ಹೋಗಿ ಮನೆ ನೋಡಿಕೊಂಡು ಬರೋಣ ಎಂದು ನಿರ್ಧರಿಸಿದೆವು. ಮನೆ ನೋಡಲು ಹೋದಾಗ ನಮ್ಮನ್ನು ಸ್ವಾಗತಿಸಿದ ಮೊದಲ ಜೀವಿ “ಕೇಸಿ” ಎನ್ನುವ ರಾಟ್ವೀಲರ್ ನಾಯಿ. ನನಗೆ ನಾಯಿ ಎಂದರೆ ಮೊದಲಿಂದಲೂ ತುಂಬಾ ಪ್ರೀತಿ. ಆದರೆ, ಈ ತಳಿಯ ನಾಯಿ ಎಂದರೆ ಅದೇಕೋ ದೂರ. ರಾಟ್ವೀಲರ್ ನ ಗಾತ್ರ, ಅದರ ತೀಕ್ಷ್ಣ ನೋಟ, ಅದರ ವರ್ತನೆ - ನನ್ನಲ್ಲಿ ಪ್ರೀತಿಗಿಂತ ಭಯ ಹುಟ್ಟಿಸುತ್ತಿದ್ದಿದ್ದೇ ಜಾಸ್ತಿ. ಮನೆಯೇನೋ ಇಷ್ಟವಾಯಿತು. ಆದರೆ ಆ ಮನೆಯ ಯಜಮಾನನ ಆ ನಾಯಿ?!

ಹೊಸ ಮನೆಯಲ್ಲಿ ಹೊಸ ಜೀವನ ಶುರುವಾಯಿತು. ಬೀದಿ ನಾಯಿಯನ್ನೂ ಹಿಡಿದು ಮುದ್ದು ಮಾಡುವ ನಾನು, ಈ ಕೇಸಿಯನ್ನು ಸನಿಹ ಕರೆಯಲು ಅದೇಕೋ ಹಿಂಜರಿಯುತ್ತಿದ್ದೆ. ಆದರೆ ಆಕೆ ನನ್ನ ಹಿಂಜರಿಕೆಯ ಬಗ್ಗೆ ಸ್ವಲ್ಪವೂ ಕೋಪಿಸಿಕೊಳ್ಳದೇ ಪದೇ ಪದೇ ನನ್ನೊಂದಿಗೆ ಆಡಲು ಬರುತ್ತಿದ್ದಳು. ಕ್ರಮೇಣ ಆಕೆಯ ಶಾಂತತೆ, ಪ್ರೀತಿಸುವ ಬಗೆ, ಆಕೆಯ ವಿಶ್ವಾಸಾರ್ಹ ವರ್ತನೆ ನನಗೇ  ಅರಿವಾಗದಂತೆ ಆಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವಂತೆ ಮಾಡಿತು. ತನ್ನ ಮನೆಯಲ್ಲಿ ತನಗೆ ಬೇಸರವಾದಾಗ, ನಮ್ಮ ಮನೆಯ ಬಾಗಿಲ ಬಳಿ ಬಂದು ಅಕ್ಷರಶಃ ಬಾಗಿಲು ಬಡೆದು, ಒಳ ಬಂದು ಕುಳಿತುಕೊಳ್ಳುತ್ತಿದ್ದಳು. ಹೊಟ್ಟೆ ಹಸಿದರೆ, ತನ್ನದೇ ಮನೆ ಎನ್ನುವಂತೆ ನಮ್ಮ ಮನೆಯ ಅಡುಗೆ ಮನೆಗೆ ಹೋಗಿ ತನಗೆ ಇಷ್ಟವಾಗುವುದನ್ನು ಕೇಳಿ ಪಡೆದು ತಿನ್ನುತ್ತಿದ್ದಳು. ತನಗೆ ಬೇಸರವಾಗಿದ್ದರೆ ಸೋಫಾ ಹತ್ತಿ ನನ್ನ ತೊಡೆಯ ಮೇಲೆ ತನ್ನ ತಲೆ ಇಟ್ಟು “ನನ್ನ ತಲೆ ಸವರು” ಎನ್ನುವಂತೆ ಸೂಚಿಸುತ್ತಿದ್ದಳು. ನನಗೆ ಬೇಸರವಾದಾಗ, ನನ್ನ ಮುಖದ ಬಳಿ ತನ್ನ ಮುಖವಿಟ್ಟು ‘ಎಲ್ಲವೂ ಸರಿಹೋಗುತ್ತದೆ’ ಎನ್ನುವ ಭಾವವನ್ನು ತೋರುತ್ತಿದ್ದಳು. ಅದೆಷ್ಟೋ ಬಾರಿ ನಾನು ಕೋಪಗೊಂಡು “ಕೇಸಿ, ಗೋ ಔಟ್ ನೌ! (ಮನೆಯಿಂದ ಹೊರಹೋಗು)” ಎಂದಾಗ, ನನ್ನ ಬಳಿ ಬಂದು ಕುಳಿತು ನನ್ನ ಕೋಪ ತಣ್ಣಗಾಗುವವರೆಗೂ ನನ್ನನ್ನು ಮುದ್ದು ಮಾಡುತ್ತಿದ್ದಳು. ನಾಯಿ ಸಾಕಿದರೇ, ಜೂಲಿ ನಾಯಿ ಅಥವಾ ಅಲ್ಸೇಷಿಯನ್ ತಳಿ ಅಥವಾ ಪಮೇರಿಯನ್ ನಾಯಿಯನ್ನೇ ಎಂದು ನಿರ್ಧರಿಸಿದ್ದ ನನಗೆ, ಜೊತೆಗೊಂದು ರಾಟ್ವೀಲರ್ ನಾಯಿಯನ್ನೂ ಸಾಕಬೇಕು ಎನ್ನುವ ಭಾವ ಮೂಡಿಸಿದಾಕೆ ಕೇಸಿ. 

ಲಂಡನ್ನಿನ ಆ ಮನೆ ಬದಲಿಸಿ ಎರಡು ವರ್ಷವಾಗಿದೆ. ಆದರೆ ಆಕೆಯ ಧೈರ್ಯ, ನಿಷ್ಠೆ, ಪ್ರೀತಿ, ಕರುಣೆ, ತಾಳ್ಮೆ, ಎಲ್ಲವೂ ನನ್ನನ್ನು ಈಗಲೂ ಕಾಡುತ್ತವೆ. ಬಹುಶಃ ಯಾರಾದರೂ ನನಗೆ ಲಂಡನ್ನಿನಿಂದ ಭಾರತಕ್ಕೆ ಬಂದ ಮೇಲೆ ತುಂಬಾ ಮಿಸ್ ಮಾಡಿಕೊಳ್ಳುವ ಸಂಗತಿಯಾವುದು ಎಂದು ಕೇಳಿದರೆ, I would definitely say “I Miss Casey and her love!”




Read Full Script
Rate your review

Stay connected

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

image description

Marufganj Mandi - A Wholesal

image description

Sankat Mochan Temple Varanas

image description

Get Funds For Emergencies By

image description

Skill set required to be a g

image description

How to Grow Thicker Eyebrows

image description

Solve a financial problem wi

COMMENTS

leave a comment