Choose Language:

ಮದುಮಗಳ ಸಂಭ್ರಮ ಹಾಗೂ ಕಣ್ಣಂಚಿನ ಹನಿಯ ನಡುವಿನ ಕಥೆ!

ಮೊನ್ನೆ ಸ್ನೇಹಿತೆಯೊಬ್ಬಳ ಮದುವೆಗೆ ಹೋಗಿದ್ದೆ. ನಮ್ಮಿಬ್ಬರದು ತುಂಬಾ ವರ್ಷದ ಗೆಳೆತನ. ಮದುವೆಗೆ ಬರಲೇಬೇಕು ಅಂತ ಹಠ  ಮಾಡಿ, ಕರೆಸಿಕೊಂಡಿದ್ದಳು. 

ಮದುವೆಮನೆ ಅಂದಮೇಲೆ ಸಹಜವಾಗಿಯೇ ಎಲ್ಲರಲ್ಲೂ ಸಂಭ್ರಮ. ಅಜ್ಜಿಯಂದಿರು ಹಿಂದಿನ ಚೇರ್-ಗಳಲ್ಲಿ ಕುಳಿತು “ಹುಡುಗಿ ಚೆಂದಗಿದ್ದಾಳೆ, ಹುಡುಗ ಬೆಳ್ಳಗಿದ್ದಾನೆ” ಅನ್ನುವುದರ ಬಗ್ಗೆ ಚರ್ಚಿಸುತ್ತಿದ್ದರೇ, ಅಂಕಲ್, ಆಂಟಿಗಳು ಮದುವೆಗೆ ಬಂದವರು- ಹೋದವರ, ಕೊಟ್ಟದ್ದು-ಪಡೆದದ್ದರ ಬಗ್ಗೆ ಚರ್ಚಿಸುತ್ತಾ ಕೂತಿದ್ದರು. ಅವೆಲ್ಲದರ ನಡುವೆ ಅಲ್ಲೆಲ್ಲೋ ನನ್ನ ಗೆಳತಿಯ ಅಪ್ಪ ಬರುವವರಿಗೆ “ಬನ್ನಿ” ಅಂತ ಹೆಮ್ಮೆಯಿಂದ ಸ್ವಾಗತಿಸಿ, ಮದುವೆ ಮುಗಿಸಿ ಹೊರಟವರಿಗೆ “ಊಟ ಮಾಡಿಕೊಂಡು ಹೋಗಿ” ಎಂದು ಹೇಳಿ ಕಳಿಸುತ್ತಿದ್ದರು. ಅಮ್ಮ ಆಕೆಯ ಪಕ್ಕದಲ್ಲೇ ಇದ್ದುಕೊಂಡು ಆಕೆಯ ಸೀರೆ ಸರಿಯಾಗಿದೆಯಾ, ಆಕೆಗೆ ಏನಾದರೂ ಬೇಕಿದೆಯಾ ಅಂತ ಗಮನಹರಿಸುತ್ತಲೇ, ಮದುವೆಗೆ ಬಂದಿದ್ದ ಬಂಧು-ಮಿತ್ರರನ್ನು ಮಾತನಾಡಿಸುತ್ತಾ ನಗುಮೊಗದಿಂದ ನಿಂತಿದ್ದರು. 

ನನ್ನ ಗೆಳತಿ ಮಾತ್ರ ತನ್ನ ಸೀರೆಯ ನೆರಿಗೆ ಸರಿಯಾಗಿದೆಯಾ, ತನ್ನ ಕುತ್ತಿಗೆಯಲ್ಲಿರುವ ನೆಕ್-ಲೇಸ್ ಸರಿಯಾಗಿ ಕುಳಿತಿದೆಯಾ ಎಂದು ಆಗೊಮ್ಮೆ-ಈಗೊಮ್ಮೆ ನೋಡಿಕೊಳ್ಳುತ್ತಾ, ಕ್ಯಾಮರಾಗೆ ಪೋಸ್ ಕೊಡುತ್ತಾ, ಮುಗುಳ್ನಗುತ್ತಾ ನಿಂತಿದ್ದಳು. ಆಕೆಯ ನಗುವಿನಲ್ಲೂ ಗಾಂಭೀರ್ಯತೆ ಇತ್ತು. ಆಕೆಯ ಚೆಲ್ಲಾಟತನದ ಕಿಂಚಿತ್ತೂ ಸುಳಿವಿಲ್ಲ. ನನ್ನೊಂದಿಗೆ ಅಡಿ-ಬೆಳೆದ ಹುಡುಗಿ ಈಕೆನೇನಾ ಅನ್ನುವಷ್ಟು ಎಲ್ಲವೂ ಬದಲಾಗಿದೆ. ಸುಮಾರು ಒಂದು ತಾಸು ಆಕೆಯನ್ನೇ ನೋಡುತ್ತಾ ಕುಳಿತೆ. ಮುಖದಲ್ಲಿ ನಗುವಿದ್ದರೂ, ಅದೇನೋ ಯೋಚಿಸುತ್ತಿದ್ದಾಳೆ ಅನ್ನಿಸಿ, ಮಾತನಾಡಿಸಿ ಕೇಳಿಯೇ ಬಿಡೋಣ ಅನ್ನಿಸಿದರೂ, ಸೂಕ್ತ ಸಮಯವಲ್ಲವೇನೋ ಎಂದುಕೊಂಡು ಸುಮ್ಮನಾದೆ. ಹಾಗೆ ಯೋಚಿಸುತ್ತಾ ಕುಳಿತಿದ್ದ ನನಗೆ, ಬಹುಶಃ ಆಕೆಯ ಮನಸ್ಸು ಕೂಡ ಹಸೆಮಣೆಯಲ್ಲಿ ತಲೆ ಬಗ್ಗಿಸಿ ತಾಳಿ ಕಟ್ಟಿಸಿಕೊಂಡ ಪ್ರತಿಯೊಬ್ಬ ಹೆಣ್ಣಿನ ಮನಃಸ್ಥಿತಿಯನ್ನೇ ಅನುಭವಿಸುತ್ತಿರಬಹುದೇನೋ ಅನ್ನಿಸಿತು. 

ಮದುವೆಯಾಗಿ ಮನೆಯಿಂದ ತಮ್ಮ ಮಗಳು ಹೊರಟಿದ್ದಾಳೆ ಎಂದು ತಿಳಿದಿದ್ದರೂ ಅಪ್ಪ-ಅಮ್ಮ ತಮ್ಮ ಎದೆಯಲ್ಲೇ ಆ ಸಂಕಟವನ್ನು ಹುದುಗಿಸಿಟ್ಟುಕೊಂಡು, ಮದುವೆ ಮಾಡಿಕೊಡುತ್ತಿದ್ದಾರೆ. ಅಮ್ಮ ಸಂಕಟವನ್ನು ತಡೆಹಿಡಿದುಕೊಳ್ಳಲಾಗದೇ, ಆಗೊಮ್ಮೆ -ಈಗೊಮ್ಮ ಕಣ್ಣಿನ ಸಂಧಿಯಿಂದ ಕಣ್ಣೀರೋರೆಸಿಕೊಂಡು ಮತ್ತೆ ನಗುನಗುತ್ತಾ ಬಂದು ನಿಲ್ಲುತ್ತಾರೆ. ತಾನು ತನ್ನ ಜೀವನದ ಮುಖ್ಯ ಘಟ್ಟವನ್ನು ಕಳೆದ ಮನೆ, ಹೆಜ್ಜೆ-ಹೆಜ್ಜೆಗೂ ತನ್ನೊಂದಿಗೆ ಇದ್ದ ಅಪ್ಪ-ಅಮ್ಮ, ಆಗಾಗ ಜಗಳ ಮಾಡಿದರೂ, ಕಷ್ಟ-ನೋವು ಅಂದಾಗ “ನಾನಿದಿನೇ! ತಲೆ ಕೆಡಿಸ್ಕೊಬೇಡ!” ಅಂದು ಧೈರ್ಯ ಹೇಳಿ, ಜೊತೆಗಿರುತ್ತಿದ್ದ ಅಕ್ಕ-ಅಣ್ಣ, ಎಲ್ಲರನ್ನೂ ಬಿಟ್ಟು ಹೊಸ ಮನೆಗೆ ಪಯಣ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿ, ಎಲ್ಲವೂ ಖುಷಿಯೇ! ಆದರೆ ಹುಟ್ಟಿಸಿ-ಬೆಳೆಸಿದ ಅಪ್ಪಾ-ಅಮ್ಮ, ಕೈ ಹಿಡಿದ ಅಕ್ಕ-ಅಣ್ಣ, ಆಡಿ-ಬೆಳೆದ ಮನೆ ಎಲ್ಲವೂ ಬಿಟ್ಟು ಹೋಗಬೇಕೆ ಎನ್ನುವ ಸಂಕಟ. ಆ ಮನೆಯಲ್ಲಿ ತನ್ನದು ಎಂದು ಹೇಳಿಕೊಳ್ಳುತ್ತಿದ್ದ  ಕೋಣೆ ಇನ್ನು ತನ್ನದಲ್ಲ. ತವರೂರಿಗೆ ಬಂದಾಗ ಆ ಕೋಣೆಯಲ್ಲೇ ತಾನು ಮಲಗಿದರೂ, ಅದು ತನ್ನದು ಎನ್ನುವ ಭಾವ ಉಳಿದಿರುವುದಿಲ್ಲ! ತಾನು ಉಡುವ ಬಟ್ಟೆ, ತನ್ನ ಪುಸ್ತಕಗಳು, ತನ್ನ ವಸ್ತುಗಳು, ಎಲ್ಲವುಗಳಿಗೂ ಹೊಸ ಜಾಗ. ಮದುವೆಯಾದ ಕ್ಷಣದಿಂದ ತಾನು ಮಾತ್ತ್ಯಾರದ್ದೋ ಮನೆಯವಳು. ಹೊಸ ಸಂಬಂಧಗಳು ಬೆಸೆಯುತ್ತವೆ. ಹೆಂಡತಿಯಾಗುತ್ತಾಳೆ, ಸೊಸೆಯಾಗುತ್ತಾಳೆ, ಯಾರಿಗೋ ಅತ್ತೆ, ಅಕ್ಕ, ನಾದಿನಿ, ಈ ರೀತಿಯ ಹೊಸ ಜವಾಬ್ದಾರಿಗಳು ಮೈಗೆದರುತ್ತವೆ. ತನ್ನ ಗಂಡ ತನ್ನನ್ನು, ತನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಆಲಂಗಿಸಿಕೊಳ್ಳುತ್ತಾನಾ? ಹೊಸ ಜಾಗದ ಹೊಸ ಜನರು ತನ್ನನ್ನು ತಾನಿರುವಂತೆಯೇ ಒಪ್ಪಿಕೊಳ್ಳುತ್ತಾರಾ?! ಒಪ್ಪಿಕೊಳ್ಳಲು ತಾನೇನು ಮಾಡಬೇಕು? ಏನೆಲ್ಲಾ ಯೋಚಿಸಿ, ಹೊಸ ಕುಟುಂಬದ ಮೇಲೆ ಹೇಗೆ ಠಸ್ಸೆ ಹಾಕಬೇಕು ಎನ್ನುವ ಯೋಜನೆ. ಆ ಯೋಜನೆ ಸಾಧಿಸಲಾಗುತ್ತದೋ, ಇಲ್ಲವೇ ಎಲ್ಲಾ ನೀರು ಪಾಲಾಗುತ್ತದೋ ಗೊತ್ತಿಲ್ಲ. ಈ ರೀತಿಯ ನೂರಾರು ಯೋಚನೆಗಳನ್ನು ಹೊತ್ತು, ಆ ಯೋಚನೆಗಳ ಸುಳಿವು ಯಾರಿಗೂ ಸಿಗಬಾರದು ಎಂಬ ಆಶಯದಿಂದ ನಗುಮೊಗದೊಂದಿಗೆ ಬಂದವರಿಗೆ, ಹೋಗುತ್ತಿರುವವರಿಗೆ ಮಾತನಾಡಿಸುತ್ತಾ ನಿಂತಿರಬಹುದಾ ಆ ಹುಡುಗಿ ಎಂದುಕೊಂಡು, ಆಕೆಯ ಬಳಿ ಹೋಗಿ, “Wish you happy married life, ಕಣೇ!” ಎಂದಾಗ, ಆಕೆಯ ಕಣ್ಣಂಚಿನ ಹನಿ ಹಾಗೂ ಆಕೆಯ ಮೊಗದ ನಗುವು ನನ್ನ ಯೋಚನೆಗಳಿಗೆ ಸಮ್ಮತಿಸಿದಂತಿದ್ದವು.  

Read Full Script
Rate your review

Stay connected

About the Author

image description

I am an Engineering graduate with the experience in IT field and Marketing field but my passion for writing outstripped everything. And now, here I am as a full-time passionate writer. I was introduced to the fantastic world of books at the very young age. Being a keen observer of the life and its idiosyncrasies, each day offers me new thoughts and ideas. I delight in encapsulating those thoughts and ideas in words. My other interests are Face Reading and Graphology. And what more? I admire the beauty of nature and love being connected with it. To know further about me and my thought pattern, you can follow me at sushmalokapur.blogspot.in

image description

Marufganj Mandi - A Wholesal

image description

Sankat Mochan Temple Varanas

image description

Get Funds For Emergencies By

image description

Skill set required to be a g

image description

How to Grow Thicker Eyebrows

image description

Solve a financial problem wi

COMMENTS

leave a comment